ಮಹೇಶ್ ತಿಮರೋಡಿ ಅವರಿಗೆ ಬೇಲ್ ಸಿಕ್ಕೇ ಸಿಗುತ್ತದೆ, ಅನುಮಾನವೇ ಬೇಡ: ವಿಜಯವ್ಯಾಸ್ ಪೂಜಾರ್, ವಕೀಲ

ಅರುಣ್​ ಕುಮಾರ್​ ಬೆಳ್ಳಿ

Updated on: Aug 21, 2025 | 8:27 PM

ಆಗಸ್ಟ್ 16ರಂದು ಮಹೇಶ್ ತಿಮರೋಡಿ ಅಪ್ಲೋಡ್ ಮಾಡಿದ ವಿಡಿಯೋವೊಂದು ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುತ್ತದೆ ಎಂದು ಆರೋಪಿಸಲಾಗಿದೆ, ಇದುವರೆಗೆ ರಾಜ್ಯದಲ್ಲಿ ಎಲ್ಲೂ ಅಹಿತಕರ ಘಟನೆ ನಡೆದಿಲ್ಲ ಮತ್ತು ತಿಮರೋಡಿ ಅವರು ಬಿಎಲ್ ಸಂತೋಷ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿದ್ದಾರೆಂದು ಹೇಳಲಾಗಿದೆ, ಆದರೆ ಇಲ್ಲಿ ಸಂತೋಷ ಅವರು ದೂರುದಾರರಲ್ಲ, ಎಲ್ಲ ಸಂಗತಿಗಳನ್ನು ಕೋರ್ಟ್​​ಗೆ ತಿಳಿಸಿದ್ದೇವೆ ಎಂದು ವಕೀಲ ಪೂಜಾರ್ ಹೇಳಿದರು.

ಉಡುಪಿ, ಆಗಸ್ಟ್ 21: ಮಹೇಶ್ ಶೆಟ್ಟಿ ತಿಮರೋಡಿಯವರನ್ನು ನ್ಯಾಯಾಲಯವು ಆಗಸ್ಟ್ 23 ರವರೆಗೆ ನ್ಯಾಯಾಂಗ ಕಸ್ಟಡಿಗೆ (judicial custody) ಒಪ್ಪಿಸಿದ ಬಳಿಕ ನಮ್ಮ ವರದಿಗಾರನೊಂದಿಗೆ ಮಾತಾಡಿದ ಅವರ ವಕೀಲ ವಿಜಯವ್ಯಾಸ್ ಪೂಜಾರ್, ಜಾಮೀನು ಅರ್ಜಿಯನ್ನು ಮೂವ್ ಮಾಡಲಾಗಿದೆ ಮತ್ತು ಅದು ಸಿಗುವ ಭರವಸೆ ತಮಗಿದೆ ಎಂದು ಹೇಳಿದರು. ತಿಮರೋಡಿಯವರನ್ನು ಬಂಧಿಸಿದ ರೀತಿ ಸರಿಯಿಲ್ಲ, ನೋಟೀಸನ್ನು ಹೆಂಡತಿಗೆ ನೀಡಿ ಗಂಡನನ್ನು ಬಂಧಿಸಲಾಗಿದೆ, ತಮ್ಮ ಕಕ್ಷಿದಾರ ಸಾಕ್ಷ್ಯ ನಾಶಮಾಡುವ ಪ್ರಯತ್ನ ಮಾಡಿಲ್ಲ, ತಲೆಮರೆಸಿಕೊಳ್ಳುವ ಪ್ರಯತ್ನವನ್ನೂ ಅವರು ಮಾಡಿಲ್ಲ, ಎಲ್ಲ ಸಂಗತಿಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗಿದೆ, ಹಾಗಾಗಿ ಅವರು ಬೇಲ್ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಿದೆ ಎಂದು ಪೂಜಾರ್ ಹೇಳಿದರು.

ಇದನ್ನೂ ಓದಿ: ತಿಮರೋಡಿ ಮತ್ತು ಮಟ್ಟೆಣ್ಣನವರ್ ವಿರುದ್ಧ ಧರ್ಮಸ್ಥಳದಲ್ಲಿ ದೂರು ದಾಖಲಿಸಿದ ಸ್ನೇಹಮಯಿ ಕೃಷ್ಣ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.