AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿಮರೋಡಿ ಮತ್ತು ಮಟ್ಟೆಣ್ಣನವರ್ ವಿರುದ್ಧ ಧರ್ಮಸ್ಥಳದಲ್ಲಿ ದೂರು ದಾಖಲಿಸಿದ ಸ್ನೇಹಮಯಿ ಕೃಷ್ಣ

ತಿಮರೋಡಿ ಮತ್ತು ಮಟ್ಟೆಣ್ಣನವರ್ ವಿರುದ್ಧ ಧರ್ಮಸ್ಥಳದಲ್ಲಿ ದೂರು ದಾಖಲಿಸಿದ ಸ್ನೇಹಮಯಿ ಕೃಷ್ಣ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 21, 2025 | 5:08 PM

Share

ನೀವು ಯಾಕೆ ಮೈಸೂರಿಂದ ಇಲ್ಲಿಯವರೆಗೆ ಬಂದು ದೂರು ದಾಖಲಿಸಿದ್ದು ಯಾಕೆ ಎಂದು ಸ್ನೇಹಮಯಿ ಕೃಷ್ಣ ಅವರನ್ನು ಕೇಳಿದಾಗ, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರೂ ದೂರು ದಾಖಲಿಸಿರಲಿಲ್ಲ ಅದೇ ಕಾರಣಕ್ಕೆ ತಾನು ದೂರು ದಾಖಲಿಸಿದ್ದೇನೆ ಎಂದು ಹೇಳಿದ ಅವರು ಮಾಸ್ಕ್​ಮ್ಯಾನ್ ವಿರುದ್ಧ ತಾನು ದೂರು ದಾಖಲಿಸಲಿಲ್ಲ, ಮುಂಬರುವ ದಿನಗಳಲ್ಲಿ ಅವನ ವಿರುದ್ಧವೂ ದೂರು ದಾಖಲಿಸಲಾಗುವುದು ಎಂದರು.

ಮಂಗಳೂರು, ಆಗಸ್ಟ್ 21: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಮತ್ತು ಅವರ ಪತ್ನಿಯ ವಿರುದ್ಧ ದೂರು ದಾಖಲಿಸಿ ರಾಜ್ಯದಲ್ಲಿ ಮನೆಮಾತಾಗಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇಂದು ಧರ್ಮಸ್ಥಳಕ್ಕೆ ತೆರಳಿ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Timarodi ) ಮತ್ತು ಗಿರೀಶ್ ಮಟ್ಟೆಣ್ಣನವರ್ ವಿರುದ್ಧ ದೂರು ದಾಖಲಿಸಿದರು. ನಮ್ಮ ವರದಿಗಾರನೊಂದಿಗೆ ಮಾತಾಡಿದ ಅವರು, ತಿಮರೋಡಿ ಮತ್ತು ಗಿರೀಶ್ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುವ ಕುತಂತ್ರ ಮಾಡಿದ್ದಾರೆ, ಕೇವಲ ದುರುದ್ದೇಶದೊಂದಿಗೆ ಅವರು ಇದನ್ನೆಲ್ಲ ಮಾಡುತ್ತಿದ್ದಾರೆ ಮತ್ತು ಕ್ಷೇತ್ರಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ಹೇಳಿದರು. ಸುಜಾತ ಭಟ್ ಅನ್ನುವವರನ್ನು ಈಗ ತಮ್ಮೊಂದಿಗೆ ಸೇರಿಸಿಕೊಂಡಿದ್ದಾರೆ ಎಂದ ಕೃಷ್ಣ ತಾನು ನೀಡಿರುವ ದೂರನ್ನು ಸ್ವೀಕರಿಸಿ ಸ್ವೀಕೃತಿ ಪತ್ರ ನೀಡಿದ್ದಾರೆ, ಎಸ್ಐಟಿ ತನಿಖೆ ನಡೆಯುತ್ತಿರುವುದರಿಂದ ಎಫ್​ಐಅರ್ ದಾಖಲಿಸಲು ಬರೋದಿಲ್ಲ ಎಂದು ಪೊಲೀಸರು ಹೇಳಿದ್ದಾರೆ ಎಂದರು.

ಇದನ್ನೂ ಓದಿ:  ಸಿದ್ದರಾಮಯ್ಯ ರಾಜೀನಾಮೆ ನೀಡುವ ಕ್ಷಣ ಹತ್ತಿರ: ಕೋರ್ಟ್​ ತೀರ್ಪು ಮೊದಲೇ ಸ್ನೇಹಮಯಿ ಕೃಷ್ಣ ಭವಿಷ್ಯ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ