‘ನಾನು, ವಿಜಯ್, ಸ್ಪೀಕರ್ ಒಂದೇ ಕಾಲೇಜಲ್ಲಿ ಓದಿದವರು’: ಕಾಲೇಜು ದಿನಗಳ ವಿಧಾನಸಭೆಯಲ್ಲಿ ನೆನಪಿಸಿದ ಉದಯನಿಧಿ ಹೇಳಿದ್ದೇನು ನೋಡಿ!

Updated on: May 12, 2026 | 12:28 PM

ತಮಿಳುನಾಡು ವಿಧಾನಸಭೆಯಲ್ಲಿ ಮಂಗಳವಾರ ಉದಯನಿಧಿ ಸ್ಟಾಲಿನ್ ಮತ್ತು ಸಿಎಂ ವಿಜಯ್ ನಡುವೆ ಕಾಲೇಜು ದಿನಗಳ ನೆನಪುಗಳನ್ನು ಮೆಲುಕು ಹಾಕುವುದರೊಂದಿಗೆ ರಾಜಕೀಯ ಚರ್ಚೆಯೂ ನಡೆಯಿತು. ಡಿಎಂಕೆ ಆಡಳಿತದಲ್ಲಿ ಸೀನಿಯರ್ ಬ್ಯಾಚ್ ಆಗಿದ್ದು, ಹೊಸದಾಗಿ ಅಧಿಕಾರ ಹಿಡಿದಿರುವ ವಿಜಯ್‌ಗೆ ರಾಜಕೀಯ ಪಾಠ ಮಾಡಲು ನಾವು ಸಿದ್ಧರಿದ್ದೇವೆ ಎಂದು ಉದಯನಿಧಿ ಹೇಳಿದ್ದಾರೆ.

ಚೆನ್ನೈ, ಮೇ 12: ತಮಿಳುನಾಡು ವಿಧಾನಸಭೆಯಲ್ಲಿ ಮಂಗಳವಾರ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ಹಳೆಯ ಸ್ನೇಹದ ನೆನಪುಗಳನ್ನು ಮೆಲುಕು ಹಾಕಿದ್ದು ಗಮನ ಸೆಳೆದಿದೆ. ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಮುಖ್ಯಮಂತ್ರಿ ವಿಜಯ್ ಅವರ ಕಾಲೆಳೆಯುತ್ತಲೇ, ತಮಿಳುನಾಡು ರಾಜಕೀಯದಲ್ಲಿ ಡಿಎಂಕೆ ಎಷ್ಟು ಅನುಭವಿ ಪಕ್ಷ ಎಂಬ ಸಂದೇಶವನ್ನೂ ರವಾನಿಸಿದರು.

‘ನಾನು, ಸಿಎಂ ವಿಜಯ್ ಮತ್ತು ಸ್ಪೀಕರ್ ಪ್ರಭಾಕರ್ ಎಲ್ಲರೂ ಒಂದೇ ಕಾಲೇಜಿನಲ್ಲಿ ಓದಿದವರು. ಆದರೆ ಆಡಳಿತದ ವಿಷಯಕ್ಕೆ ಬಂದರೆ ಡಿಎಂಕೆ ‘ಸೀನಿಯರ್ ಬ್ಯಾಚ್’. ಆಡಳಿತ ಹೇಗೆ ನಡೆಸಬೇಕು ಎಂಬುದನ್ನು ನಾವು ನಿಮಗೆ ಕಲಿಸಲು ಸಿದ್ಧರಿದ್ದೇವೆ’ ಎಂದು ಉದಯನಿಧಿ ಸ್ಟಾಲಿನ್ ಸಿಎಂ ವಿಜಯ್ ಉದ್ದೇಶಿಸಿ ಹೇಳಿದರು. ಇದೇ ವೇಳೆ, ವಿಜಯ್ ತುಟಿಯಂಚಿನಲ್ಲಿ ಕಿರು ನಗು ಮೂಡಿದ್ದು ಕಾಣಿಸಿತು. ಈ ಮಾತಿನ ಮೂಲಕ ವಿಜಯ್ ಅವರು ರಾಜಕೀಯಕ್ಕೆ ಹೊಸಬರು ಮತ್ತು ಡಿಎಂಕೆ ಅನುಭವದ ಮುಂದೆ ಇನ್ನೂ ಕಲಿಯುವುದು ಸಾಕಷ್ಟಿದೆ ಎಂದು ಉದಯನಿಧಿ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: May 12, 2026 12:27 PM
Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More