ವರ್ತೂರು ಸಂತೋಷ್ ಜಾಮೀನು ಕೋರಿ ಮನವಿ ಸಲ್ಲಿಸಲಾಗಿದ್ದು ಬುಧವಾರ ವಿಚಾರಣೆ ನಡೆಯಲಿದೆ: ನಟರಾಜ, ಸಂತೋಷ್ ವಕೀಲ

|

Updated on: Oct 23, 2023 | 7:15 PM

ಅಸಲಿಗೆ ಹುಲಿಯುಗುರಿನ ಪೆಂಡೆಂಟ್ ಬಳಸುವುದು, ಧರಿಸುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಅಪರಾಧ ಅಂತ ಅವರಿಗೆ ಗೊತ್ತಿರಲಿಲ್ಲ ಎಂದು ನಟರಾಜ್ ಹೇಳಿದರು. ಸಂತೋಷ್ ಅವರಿಗೆ ಜಾಮೀನು ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದ್ದು ಅದರ ವಿಚಾರಣೆ ಬುಧವಾರ ನಡೆಯಲಿದೆ ಎಂದು ವಕೀಲ ನಟರಾಜ್ ಹೇಳಿದರು.

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿಗಳಲ್ಲೊಬ್ಬರಾಗಿದ್ದ ವರ್ತೂರು ಸಂತೋಷ್ (Varthur Santosh) ಅವರನ್ನು ಹುಲಿಯುಗುರಿನ ಪೆಂಡೆಂಟ್ (tiger claw pendant) ಧರಿಸಿದ ಆರೋಪದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ (Wildlife Protection Act) ಬಂಧಿಸಿ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಂಗ ಕಸ್ಟಡಿಗೆ (judicial custody) ಒಪ್ಪಿಸಲಾಗಿದೆ. ಸಂತೋಷ್ ರನ್ನು ಇಂದು ನ್ಯಾಯಾಧೀಶರ ಎದುರು ಹಾಜರುಪಡಿಸಿದಾಗ ಅವರ ಪರ ವಾದಿಸಿದ ಅಡ್ವೋಕೇಟ್ ನಟರಾಜ್ ಹೇಳುವ ಪ್ರಕಾರ ಅವರ ಕಕ್ಷಿದಾರ ಸುಮಾರು 3-4 ವರ್ಷಗಳ ಹಿಂದೆ ತಮಿಳುನಾಡುಗೆ ಹೋಗಿದ್ದಾಗ ಹೊಸೂರು-ಧರ್ಮಪುರಿ ನಡುವೆ ಯಾವುದೋ ಒಂದು ಭಾಗದಲ್ಲಿ ಅದನ್ನು ತಗೊಂಡಿದ್ದಾರಂತೆ. ಅಸಲಿಗೆ ಹುಲಿಯುಗುರಿನ ಪೆಂಡೆಂಟ್ ಬಳಸುವುದು, ಧರಿಸುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಅಪರಾಧ ಅಂತ ಅವರಿಗೆ ಗೊತ್ತಿರಲಿಲ್ಲ ಎಂದು ನಟರಾಜ್ ಹೇಳಿದರು. ಸಂತೋಷ್ ಅವರಿಗೆ ಜಾಮೀನು ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದ್ದು ಅದರ ವಿಚಾರಣೆ ಬುಧವಾರ ನಡೆಯಲಿದೆ ಎಂದು ವಕೀಲ ನಟರಾಜ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ