Loading video

ಮುಖ್ಯಮಂತ್ರಿಯವರು ಜಮೀರ್ ಅಹ್ಮದ್ ರಾಜೀನಾಮೆ ಪಡೆಯುವವರೆಗೆ ಹೋರಾಟ ಮಾಡುತ್ತೇವೆ: ಬಿವೈ ವಿಜಯೇಂದ್ರ

|

Updated on: Nov 22, 2023 | 5:02 PM

ಮುಂದುವರಿದು ಮಾತಾಡುವ ವಿಜಯೇಂದ್ರ, ಮಾತೆತ್ತಿದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಪ್ರಸ್ತಾಪಿಸುವ ಕಾಂಗ್ರೆಸ್ ನಾಯಕರು ತಮ್ಮದು ದಲಿತ ವಿರೋಧಿ ಸರ್ಕಾರ ಅಂತ ಸಾಬೀತು ಮಾಡಿದ್ದಾರೆ ಅನ್ನುತ್ತಾರೆ. ಜಮೀರ್ ಮೇಲೆ ರೋಷ ಕಾರುವ ಭರದಲ್ಲಿ ವಿಜಯೇಂದ್ರ ಏನೇನೋ ಮಾತಾಡಿದ್ದಾರೆ ಅಂತ ಕನ್ನಡಿಗರಿಗೆ ಭಾಸವಾಗುತ್ತಿದೆ.

ಮಂಗಳೂರು: ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಸಭಾಧ್ಯಕ್ಷ ಸ್ಥಾನದ ಬಗ್ಗೆ ವಿವಾದಾತ್ಮಕ ಮಾತುಗಳನ್ನಾಡಿರುವ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ರನ್ನು (BZ Zameer Ahmed Khan) ಮತ್ತೊಮ್ಮೆ ತರಾಟೆಗೆ ತೆದುಕೊಂಡರು. ಸಂವಿಧಾನಕ್ಕೆ ವಿರೋಧವಾಗಿ ಮಾತಾಡಿರುವ ಜಮೀರ್ ಅವರನ್ನು ರಸ್ತೆ ಮೇಲೆ ನಾವು ತಿರುಗಾಡಲು ಬಿಟ್ಟಿದ್ದೇ ಅಪರಾಧವಾದಂತಿದೆ ಅಂತ ಅವರು ಯಾವ ಆರ್ಥದಲ್ಲಿ ಹೇಳಿದರೋ ಗೊತ್ತಿಲ್ಲ. ಅವರ ವಿರುದ್ಧ ಹೋರಾಟ ಮಡುತ್ತೇವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಜಮೀರ್ ರಾಜೀನಾಮೆ ಪಡೆಯುವವರೆಗೆ ವಿಶ್ರಮಿಸುವುದಿಲ್ಲ ಅಂತ ಹೇಳಿದ್ದರೆ ಸರಿಯಿತ್ತು ಮತ್ತು ಸಾಕಿತ್ತು. ಅಮೇಲೆ ಅದನ್ನು ಅವರು ಹೇಳುತ್ತಾರೆ ಅದು ಬೇರೆ ವಿಷಯ. ಆದರೆ, ಅವರೀಗ ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷ ಆಗಿರುವುದರಿಂದ ಭಾಷೆಯ ಮೇಲೆ ನಿಯಂತ್ರಣ ಇರಬೇಕು. ಮುಂದುವರಿದು ಮಾತಾಡುವ ವಿಜಯೇಂದ್ರ, ಮಾತೆತ್ತಿದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಪ್ರಸ್ತಾಪಿಸುವ ಕಾಂಗ್ರೆಸ್ ನಾಯಕರು ತಮ್ಮದು ದಲಿತ ವಿರೋಧಿ ಸರ್ಕಾರ ಅಂತ ಸಾಬೀತು ಮಾಡಿದ್ದಾರೆ ಅನ್ನುತ್ತಾರೆ. ಜಮೀರ್ ಮೇಲೆ ರೋಷ ಕಾರುವ ಭರದಲ್ಲಿ ವಿಜಯೇಂದ್ರ ಏನೇನೋ ಮಾತಾಡಿದ್ದಾರೆ ಅಂತ ಕನ್ನಡಿಗರಿಗೆ ಭಾಸವಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ