ಹಿಜಾಬ್ ವಿವಾದ; ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹೊದ್ದು ಶಾಲೆಗಳಿಗೆ ಹೋಗುವಂತೆ ಕರೆ ನೀಡುತ್ತೇವೆ: ರೇಣುಕಾಚಾರ್ಯ

|

Updated on: Dec 23, 2023 | 6:26 PM

ಹಿಜಾಬ್ ನಿಷೇಧ ಆದೇಶ ಹಿಂಪಡೆದರೆ ನಡೆಯಬಹುದಾದ ಸಂಘರ್ಷಕ್ಕೆ ಹಿಂದೂಗಳಲ್ಲ, ಮುಸಲ್ಮಾನರಲ್ಲ; ಕೇವಲ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಅದಕ್ಕೆ ಹೊಣೆಗಾರರಾಗುತ್ತಾರೆ ಎಂದು ರೇಣುಕಾಚಾರ್ಯ ಹೇಳಿದರು. ಸಿದ್ದರಾಮಯ್ಯ ಕೇವಲ ಒಂದು ವರ್ಗಕ್ಕೆ ಮಾತ್ರ ಮುಖ್ಯಮಂತ್ರಿ ಅಲ್ಲ ಆರೂವರೆ ಕೋಟಿ ಕನ್ನಡಿಗರಿಗೆ ಮುಖ್ಯಮಂತ್ರಿ ಅನ್ನೋದನ್ನು ಅವರು ಮರೆಯಬಾರದು ಎಂದು ಮಾಜಿ ಶಾಸಕ ಹೇಳಿದರು.

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಶುಕ್ರವಾರ ಮೈಸೂರಲ್ಲಿ ಹಿಜಾಬ್ ನಿಷೇಧ ಆದೇಶವನ್ನು (ban on hijab order) ವಾಪಸ್ಸು ಪಡೆಯುವುದಾಗಿ ಹೇಳಿದ್ದು ಭೀಕರ ಬರದಿಂದ ರಾಜ್ಯ ತತ್ತರಿಸುತ್ತಿರುವುದನ್ನು ವಿಷಯಾಂತರ ಮಾಡಲು ಮತ್ತು ತಮ್ಮ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ (MP Renukacharya) ಹೇಳಿದರು. ಹೊನ್ನಾಳಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಸಿದ್ದರಾಮಯ್ಯ ಅವರೇನಾದರೂ ಹಿಜಾಬ್ ನಿಷೇಧ ಆದೇಶವನ್ನು ಹಿಂಪಡೆದರೆ ಹಿಂದೂ ಸಮುದಾಯದ ಶಾಲಾಮಕ್ಕಳಿಗೆ ಮತ್ತು ಕಾಲೇಜುಗಲ್ಲಿ ಓದುವ ಯುವಕ ಯುವತಿಯರಿಗೆ ಕೇಸರಿ ಶಾಲುಗಳನ್ನು ಹೊದ್ದು ಶಾಲಾ ಕಾಲೇಜುಗಳಿಗೆ ಹೋಗುವಂತೆ ಕರೆ ನೀಡಲಾಗುವುದು ಎಂದು ಹೇಳಿದರು. ಬಿಜೆಪಿ ಮುಸಲ್ಮಾನರನ್ನು ದ್ವೇಷಿಸುವುದಿಲ್ಲ, ಭಾರತ್ ಮಾತಾ ಕೀ ಜೈ ಅನ್ನುವ ಮುಸಲ್ಮಾನರನ್ನು ಆದರಿಸುತ್ತದೆ ಅದರೆ, ಪಾಕಿಸ್ತಾನ್ ಜಿಂದಾಬಾದ್ ಅನ್ನೋರನ್ನು ದ್ವೇಷಿಸುತ್ತದೆ ಎಂದು ರೇಣುಕಾಚಾರ್ಯ ಹೇಳಿದರು.

ಹಿಜಾಬ್ ನಿಷೇಧ ಆದೇಶ ಹಿಂಪಡೆದರೆ ನಡೆಯಬಹುದಾದ ಸಂಘರ್ಷಕ್ಕೆ ಹಿಂದೂಗಳಲ್ಲ, ಮುಸಲ್ಮಾನರಲ್ಲ; ಕೇವಲ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಅದಕ್ಕೆ ಹೊಣೆಗಾರರಾಗುತ್ತಾರೆ ಎಂದು ರೇಣುಕಾಚಾರ್ಯ ಹೇಳಿದರು. ಸಿದ್ದರಾಮಯ್ಯ ಕೇವಲ ಒಂದು ವರ್ಗಕ್ಕೆ ಮಾತ್ರ ಮುಖ್ಯಮಂತ್ರಿ ಅಲ್ಲ ಆರೂವರೆ ಕೋಟಿ ಕನ್ನಡಿಗರಿಗೆ ಮುಖ್ಯಮಂತ್ರಿ ಅನ್ನೋದನ್ನು ಅವರು ಮರೆಯಬಾರದು ಎಂದು ಮಾಜಿ ಶಾಸಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ