ಯತ್ನಾಳ್​ರನ್ನು ಇನ್ನಷ್ಟು ದಿನ ಸಹಿಸಿಕೊಂಡು ನಂತರ ಸರಿದಾರಿಗೆ ತರುತ್ತೇವೆ: ಕೆಎಸ್ ಈಶ್ವರಪ್ಪ

ಅರುಣ್​ ಕುಮಾರ್​ ಬೆಳ್ಳಿ

Updated on: Dec 12, 2023 | 4:02 PM

ಮನೆಯಲ್ಲಿ ಎಲ್ಲರಿಗಿಂತ ಚಿಕ್ಕ ಮಗು ಹಟ ಮಾಡಿದಾಗ ಸರಿದಾರಿಗೆ ತರಲು ರಮಿಸುತ್ತಾರೆ, ಗದರುತ್ತಾರೆ, ಕೊನೆಗೆ ಸಿಟ್ಟುಮಾಡುತ್ತಾರೆ. ಆದರೆ ಮಗುವನ್ನು ಮಾತ್ರ ಮನೆಯಿಂದ ಯಾವತ್ತೂ ಹೊರಹಾಕಲ್ಲ ಎಂದು ಈಶ್ವರಪ್ಪ ಹೇಳಿದರು. ಯತ್ನಾಳ್ ಅಂಥವರು ಎಲ್ಲ ಕಡೆ ಇರುತ್ತಾರೆ, ಅವರನ್ನು ಜೀರ್ಣಿಸಿಕೊಳ್ಳುವ ಶಕ್ತಿ ತಮ್ಮ ಪಕ್ಷಕ್ಕಿದೆ ಎಂದು ಅವರು ಹೇಳಿದರು.

ಶಿವಮೊಗ್ಗ: ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS EShwarappa), ಸ್ವಪಕ್ಷದವರ ವಿರುದ್ಧವೇ ನಾಲಗೆ ಹರಿಬಿಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರನ್ನು ನಯವಾಗಿ ಎಚ್ಚರಿಸಿದರು. ಕೆಲವು ಸ್ಥಾನಮಾನ ಸಿಗದ ನಿರಾಶೆ ಮತ್ತು ಹತಾಶೆ ಅವರಲ್ಲಿದೆ, ಹಾಗಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಾಲ್ಕು ಗೋಡೆಗಳ ನಡುವೆ ಆಡಬೇಕಿರುವ ಮಾತಗಳನ್ನು ಯತ್ನಾಳ್ ಸಾರ್ವಜನಿಕವಾಗಿ (publicly) ಆಡುತ್ತಿದ್ದಾರೆ, ಅದು ಸರಿಯಲ್ಲ ಅವರನ್ನು ತಿದ್ದುತ್ತೇವೆ ಎಂದು ಈಶ್ವರಪ್ಪ ಹೇಳಿದರು. ಪಕ್ಷದ ಹಿರಿಯರಾದ ಜೆಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಗಿಂತ ದೊಡ್ಡವರಲ್ಲ ಬಸನಗೌಡ ಯತ್ನಾಳ್, ಮನೆಯಲ್ಲಿ ಎಲ್ಲರಿಗಿಂತ ಚಿಕ್ಕ ಮಗು ಹಟ ಮಾಡಿದಾಗ ಸರಿದಾರಿಗೆ ತರಲು ರಮಿಸುತ್ತಾರೆ, ಗದರುತ್ತಾರೆ, ಕೊನೆಗೆ ಸಿಟ್ಟುಮಾಡುತ್ತಾರೆ. ಆದರೆ ಮಗುವನ್ನು ಮಾತ್ರ ಮನೆಯಿಂದ ಯಾವತ್ತೂ ಹೊರಹಾಕಲ್ಲ ಎಂದು ಈಶ್ವರಪ್ಪ ಹೇಳಿದರು. ಯತ್ನಾಳ್ ಅಂಥವರು ಎಲ್ಲ ಕಡೆ ಇರುತ್ತಾರೆ, ಅವರನ್ನು ಜೀರ್ಣಿಸಿಕೊಳ್ಳುವ ಶಕ್ತಿ ತಮ್ಮ ಪಕ್ಷಕ್ಕಿದೆ. ಅವರೊಬ್ಬ ರಾಷ್ಟ್ರವಾದಿ ಮತ್ತು ಹಿಂದೂತ್ವವಾದಿ ಅವರನ್ನು ಮತ್ತಷ್ಟು ದಿನ ಸಹಿಸಿಕೊಂಡು ಸರಿದಾರಿಗೆ ತರುತ್ತೇವೆ ಎಂದು ಈಶ್ವರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.