Rains play spoilsport: ಹಾಸನದಲ್ಲೂ ಭರ್ಜರಿ ಮಳೆ, ಮದುವೆ ಮಂಟಪದಲ್ಲಿ ನೀರು ನುಗ್ಗಿ ಸಮಾರಂಭ ಅಸ್ತವ್ಯಸ್ತ!

ಅರುಣ್​ ಕುಮಾರ್​ ಬೆಳ್ಳಿ

Updated on: Jun 20, 2023 | 6:56 PM

ಮಳೆ ಜೋರಾಗಿ ಸುರಿದಿದ್ದರಿಂದ ರಸ್ತೆಯಲ್ಲಿ ಹರಿದು ಹೋಗುತ್ತಿದ್ದ ನೀರು ಕಲ್ಯಾಣ ಮಂಟಪವನ್ನು ಹೊಕ್ಕಿದೆ. ನಿಖಾಗಾಗಿ ಸಿದ್ಧಪಡಿಸಿದ್ದ ಅಡುಗೆಯ ಗತಿ ಏನಾಯ್ತೋ?

ಹಾಸನ: ಈಗಾಗಲೇ ವರದಿ ಮಾಡಿರುವಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಇಂದು ಬೆಳಗ್ಗೆಯಿಂದಲೇ ಮಳೆ ಸುರಿಯಲಾರಂಭಿಸಿದೆ. ಹಾಸನ ನಗರದಲ್ಲೂ ವರುಣ ಆರ್ಭಟಿಸಿದ್ದಾನೆ. ನಗರದ ಹೊಸಲೈನ್ ರಸ್ತೆಯಲ್ಲಿರುವ ಕಲ್ಯಾಣ ಮಂಟಪವೊಂದರಲ್ಲಿ (kalyana Mantapa) ಇಂದು ಮುಸ್ಲಿಂ ಸಮುದಾಯದ (Muslim Community) ಮದುವೆ ಸಮಾರಂಭ ನಡೆಯಿತು. ಅದರೆ ಅದು ಹೇಗೆ ನಡೆಯಿತು ಅನ್ನೋದನ್ನು ನೀವು ಮೊಬೈಲ್ ಫುಟೇಜ್​​ ನಲ್ಲಿ ನೋಡಬಹುದು. ಮಳೆ ಜೋರಾಗಿ ಸುರಿದಿದ್ದರಿಂದ ರಸ್ತೆಯಲ್ಲಿ ಹರಿದು ಹೋಗುತ್ತಿದ್ದ ನೀರು ಕಲ್ಯಾಣ ಮಂಟಪವನ್ನು ಹೊಕ್ಕಿದೆ. ಮದುವೆಗೆ ಬಂದ ಅತಿಥಿಗಳು (invitees) ತಮ್ಮ ಬಟ್ಟೆ ಒದ್ದೆಯಾಗದಂತಿರಲು ಮಂಟಪದಲ್ಲಿನ ಎತ್ತರದ ಪ್ರದೇಶಗಳನ್ನು ಹತ್ತಿ ಕುಳಿತಿದ್ದಾರೆ. ನಿಖಾಗಾಗಿ ಸಿದ್ಧಪಡಿಸಿದ್ದ ಅಡುಗೆಯ ಗತಿ ಏನಾಯ್ತೋ?

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.