Video: ಮದುವೆಯಲ್ಲಿ ರಸಗುಲ್ಲಾ ಸಿಗಲಿಲ್ಲವೆಂದು ಕುರ್ಚಿಗಳ ಮುರಿದು ವರನ ಕಡೆಯವರಿಂದ ರಾದ್ಧಾಂತ

Updated on: Dec 04, 2025 | 12:20 PM

ಸಾಮಾನ್ಯವಾಗಿ ಮದುವೆ ಸಮಾರಂಭಗಳಲ್ಲಿ ವರ ಹಾಗೂ ವಧುವಿನ ಕುಟುಂಬದ ನಡುವೆ ಒಂದೋ ವರದಕ್ಷಿಣೆ ವಿಚಾರಕ್ಕೆ ಇಲ್ಲವೋ ಊಟದ ವಿಚಾರಕ್ಕೆ ಜಗಳವಾಗುತ್ತಲೇ ಇರುತ್ತದೆ. ಬಿಹಾರದ ಬೋಧ್​ ಗಯಾದ ಹೋಟೆಲ್​ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ರಸಗುಲ್ಲಾ ಕಡಿಮೆಯಾಯ್ತೆಂದು ವರನ ಕಡೆಯವರು ಕುರ್ಚಿಗಳನ್ನು ಮುರಿದು ರಾದ್ದಾಂತ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯ ನಂತರ ಮದುವೆಯನ್ನೇ ರದ್ದುಗೊಳಿಸಲಾಯಿತು. ಈ ಘಟನೆ ನವೆಂಬರ್ 29 ರಂದು ನಡೆದಿತ್ತು. ವಧುವಿನ ಕುಟುಂಬವು ಅದೇ ಹೋಟೆಲ್‌ನಲ್ಲಿ ತಂಗಿತ್ತು.

ಬೋಧ್​ಗಯಾ, ಡಿಸೆಂಬರ್ 04: ಸಾಮಾನ್ಯವಾಗಿ ಮದುವೆ ಸಮಾರಂಭಗಳಲ್ಲಿ ವರ ಹಾಗೂ ವಧುವಿನ ಕುಟುಂಬದ ನಡುವೆ ಒಂದೋ ವರದಕ್ಷಿಣೆ ವಿಚಾರಕ್ಕೆ ಇಲ್ಲವೋ ಊಟದ ವಿಚಾರಕ್ಕೆ ಜಗಳವಾಗುತ್ತಲೇ ಇರುತ್ತದೆ. ಬಿಹಾರದ ಬೋಧ್​ ಗಯಾದ ಹೋಟೆಲ್​ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ರಸಗುಲ್ಲಾ ಕಡಿಮೆಯಾಯ್ತೆಂದು ವರನ ಕಡೆಯವರು ಕುರ್ಚಿಗಳನ್ನು ಮುರಿದು ರಾದ್ದಾಂತ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಈ ಘಟನೆಯ ನಂತರ ಮದುವೆಯನ್ನೇ ರದ್ದುಗೊಳಿಸಲಾಯಿತು. ಈ ಘಟನೆ ನವೆಂಬರ್ 29 ರಂದು ನಡೆದಿತ್ತು. ವಧುವಿನ ಕುಟುಂಬವು ಅದೇ ಹೋಟೆಲ್‌ನಲ್ಲಿ ತಂಗಿತ್ತು. ಆರಂಭಿಕ ಆಚರಣೆಗಳನ್ನು ಮಾಡಿದ ನಂತರ, ವಧು-ವರರು ಸಪ್ತಪದಿ ತುಳಿಯಲೆಂದು ಮಂಟಪಕ್ಕೆ ಹೋಗುತ್ತಿದ್ದರು. ಆಗ ಈ ಘಟನೆ ನಡೆದಿದೆ.ವಧುವಿನ ಕುಟುಂಬವು ವರನ ಕುಟುಂಬದ ವಿರುದ್ಧ ವರದಕ್ಷಿಣೆ ಪ್ರಕರಣವನ್ನು ದಾಖಲಿಸಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ