Weekly horoscope: ಜನವರಿ 6 ರಿಂದ 12ರವರೆಗಿನ ವಾರ ಭವಿಷ್ಯ

|

Updated on: Jan 05, 2025 | 7:26 AM

ಜನವರಿ 6 ರಿಂದ 12ರವರೆಗಿನ ವಾರ ಭವಿಷ್ಯ. ಈ ವಾರದಲ್ಲಿ ಗ್ರಹಗಳ ಸಂಚಾರ, ಗ್ರಹಗಳ ಫಲಾಫಲ ಹಾಗೇ ದ್ವಾದಶ ರಾಶಿಗಳ ಫಲಾಫಲ, ವಿಶೇಷವಾಗಿ ಈ ವಾರದಲ್ಲಿ ನಡೆಯುವಂತಹ ಕಾರ್ಯಕ್ರಮಗಳೇನು? ಈ ಕಾರ್ಯಕ್ರಮಗಳು ಯಾವ್ಯಾವ ರೀತಿ ಇರುತ್ತೆ? ಎಲ್ಲವನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯ ಮಾಸ, ಹೇಮಂತ ಋತು, ಶುಕ್ಲಪಕ್ಷ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ ಹಾಗೇ ಚತುರ್ದಶಿ ವಾರ ಇದಾಗಿರುತ್ತೆ. ಈ ವಾರದಲ್ಲಿ ಶಾಕಂಬರಿ ವ್ರತವನ್ನ ಆಚರಣೆ ಮಾಡಲಾಗುತ್ತದೆ, ಹಾಗೇ ಇಡಗುಂಜಿಯಲ್ಲಿ ಗಣಪತಿ ಜಾತ್ರೆ ನಡೆಯುತ್ತದೆ. ಕೂಡಲಿ ಉತ್ಸವ ನಡೆಯತ್ತದೆ. ಮುಕ್ಕೋಟಿ ಏಕಾದಶಿಯನ್ನು ಆಚರಣೆ ಮಾಡುವ ವರ್ಷದ ಪರ್ವಹಬ್ಬ ಕೂಡ ಇದಾಗಿದೆ. ಹಾಗೇ ಈ ವಾರದಲ್ಲಿ ಬುಧಗ್ರಹ ನಾಲ್ಕನೆಯ ಒಂದು ವಿಶೇಷವಾಗಿ ಬುಧಗ್ರಹ ಧನುರ್ರಾಶಿಗೆ ಸಂಚಾರ ಮಾಡುತ್ತಾನೆ. ರಾಹು ಮೀನರಾಶಿಯಲ್ಲಿ ಹಾಗೇ ಶನಿ ಶುಕ್ರ ಕುಂಭರಾಶಿಯಲ್ಲಿ ಸಂಚಾರ ಮಾಡುತ್ತಾನೆ. ರವಿ ಬುಧ ರಾಶಿಯಲ್ಲಿ ಇದನ್ನೇ ಬುಧಾದಿತ್ಯ ಯೋಗ ಅಂತ ಕರೆಯುತ್ತಾರೆ. ರವಿ ಬುಧ ಧನುರ್ರಾಶಿಯಲ್ಲಿ ಸಂಚಾರ ಮಾಡುತ್ತಾನೆ. ಕೇತುಗ್ರಹ ಕನ್ಯಾರಾಶಿಯಲ್ಲಿ ಸಂಚಾರ ಮಾಡುತ್ತದೆ. ಹಾಗೇ ಕುಜಗ್ರಹ ಕರ್ಕಾಟಕ ರಾಶಿಯಲ್ಲಿ ಸಂಚಾರ ಮಾಡುತ್ತೆ. ಗುರುಗ್ರಹ ವೃಷಭ ರಾಶಿಯಲ್ಲಿ ಸಂಚಾರ ಮಾಡುವ ವಾರ ಕೂಡ ಇದಾಗಿದೆ.

Published on: Jan 05, 2025 07:25 AM