ಬೆಳಗಾವಿ ಅದಿವೇಶನ: ಸ್ಪೀಕರ್ ಗೆ ಎಲ್ಲರೂ ನಮಸ್ಕಾರ್ ಸಾರ್ ಅನ್ನಬೇಕು ಅಂತ ಹೇಳಿದ್ರಲ್ಲಿ ತಪ್ಪೇನಿದೆ? ಜಮೀರ್ ಅಹ್ಮದ್ ಖಾನ್
ಕರ್ನಾಟಕದಲ್ಲಿ ಖಾದರ್ ಅವರನ್ನು ಸ್ಪೀಕರ್, ತನ್ನನ್ನು ಮತ್ತು ರಹೀಂ ಖಾನ್ ರನ್ನು ಸಚಿವ, ಸಲೀಂ ಆಹ್ಮದ್ ಅವರನ್ನು ಚೀಫ್ ವ್ಹಿಪ್ ಮತ್ತು ನಸೀರ್ ಅಹ್ಮದ್ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯನ್ನಾಗಿ ಮಾಡಿ ಮುಸಲ್ಮಾನರಿಗೆ ಸಮಾನ ಅಧಿಕಾರವನ್ನು ಕಾಂಗ್ರೆಸ್ ಕಲ್ಪಿಸಿದೆ ಎಂದು ವಸತಿ ಖಾತೆ ಸಚಿವ ಬಿಜೆಡ್ ಜಮೀರ್ ಅಹ್ಮದ್ ಹೇಳಿದರು.
ಬೆಳಗಾವಿ: ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಇಂದು ಬರೀ ಗಲಾಟೆ ಮತ್ತು ಗಲಾಟೆಯ ಕೇಂದ್ರಬಿಂದುವಾಗಿದ್ದು ವಸತಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed). ಮಧ್ಯಾಹ್ನ ಊಟದ ಬಿಡುವಿನಲ್ಲಿ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಜಮೀರ್ ತಾನು ಹೇಳಿದ್ದರಲ್ಲಿ ತಪ್ಪೇನಿದೆ ಅಂತ ಕೇಳಿದರು. ವಿಧಾನ ಸಭಾ ಅಧಿವೇಶನ ಈಗ ಎರಡನೇ ವಾರಕ್ಕೆ ಕಾಲಿಟ್ಟಿದೆ, ಬಿಜೆಪಿ ಶಾಸಕರು ತನ್ನ ವಿಷಯದಲ್ಲಿ ಪ್ರಶ್ನೆ ಮಾಡಬೇಕಿದ್ದರೆ ಮೊದಲ ವಾರದಲ್ಲೇ ನೋಟೀಸ್ ಸರ್ವ್ ಮಾಡಿ ರಾಜ್ಯಪಾಲರ (governor) ಅನುಮತಿ ಪಡೆದು ಮಾಡಬೇಕಿತ್ತು, ಅಸಲಿಗೆ ಅವರಲ್ಲಿ ಸದನದಲ್ಲಿ ಮಾತಾಡಲು ವಿಷಯಗಳಿಲ್ಲ ಎಂದು ಜಮೀರ್ ಹೇಳಿದರು. ತೆಲಂಗಾಣ ವಿಧಾನ ಸಭಾ ಚುನಾವಣೆ (Telangana Assembly Polls) ಸಂದರ್ಭದಲ್ಲಿ ಹೈದರಾಬಾದ್ ನಡೆದ ಇಂಟಲೆಕ್ಟ್ ಮೀಟಿಂಗ್ ನಲ್ಲಿ (Intellect meeting) ತಾನು ಸ್ಪೀಕರ್ ವಿಷಯದಲ್ಲಿ ಮಾತಾಡಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸಲ್ಮಾನರಿಗೆ ಸಮಾನ ಅಧಿಕಾರ ಸಿಗುತ್ತಾ ಅಂತ ಕೇಳಿದ ಪ್ರಶ್ನೆಗೆ, ಕರ್ನಾಟಕದ ಉದಾಹರಣೆ ಹೇಳಿ ಒಬ್ಬ ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ಯುಟಿ ಖಾದರ್ ಅವರಿಗೆ ತನ್ನನ್ನೂ ಸೇರಿದಂತೆ ಎಲ್ಲರೂ ನಮಸ್ಕಾರ್ ಸಾರ್ ಅಂತ ಹೇಳಬೇಕು ಅಂತ ಹೇಳಿದ್ದರಲ್ಲಿ ತಪ್ಪೇನಿದೆ ಅಂತ ಜಮೀರ್ ಕೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ