WhatsApp Chat Backup: ವಾಟ್ಸ್​ಆ್ಯಪ್​ ಚಾಟ್ ಬ್ಯಾಕಪ್ ಬೇಕಾದರೆ ಗೂಗಲ್​ಗೆ ದುಡ್ಡು ಕೊಡಬೇಕು! |

|

Updated on: Mar 01, 2024 | 11:30 AM

ಚಾಟ್ ಬ್ಯಾಕಪ್ ಬೇಕಾದಲ್ಲಿ ಗೂಗಲ್ ಡ್ರೈವ್ ಮತ್ತು ಆ್ಯಪಲ್ ಐಕ್ಲೌಡ್​ಗೆ ಬ್ಯಾಕಪ್ ತೆಗೆದುಕೊಳ್ಳುವ ಆಯ್ಕೆ ಇದೆ. ಕೆಲವರು ಚಾಟ್ ಮಾತ್ರ ಬ್ಯಾಕಪ್ ಇಟ್ಟುಕೊಂಡರೆ, ಮತ್ತೆ ಕೆಲವರು ಫೋಟೊ, ವಿಡಿಯೊ ಹೀಗೆ ಎಲ್ಲವನ್ನೂ ಬ್ಯಾಕಪ್​ನಲ್ಲಿ ಇಟ್ಟುಕೊಳ್ಳುತ್ತಾರೆ. ಅದಕ್ಕೆ ಹೆಚ್ಚಿನ ಡ್ರೈವ್ ಸ್ಥಳ ಬೇಕಾಗುತ್ತದೆ. ಆದರೆ, ಮುಂದೆ ಬ್ಯಾಕಪ್ ಇಟ್ಟುಕೊಳ್ಳುವವರು ನಿಗದಿತ ಉಚಿತ ಮಿತಿಯ ಬಳಿಕ ಹೆಚ್ಚಿನ ಹಣ ಪಾವತಿಸುವುದು ಅನಿವಾರ್ಯವಾಗಬಹುದು.

ವಾಟ್ಸ್​ಆ್ಯಪ್ ಬಳಸುವವರು ಚಾಟ್​ ಬ್ಯಾಕಪ್ ಬೇಕಾದಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಕೆಲವರು ಬ್ಯಾಕಪ್ ಇಟ್ಟುಕೊಳ್ಳುವುದಿಲ್ಲ. ಕಾಲಕಾಲಕ್ಕೆ ಚಾಟ್ ಬ್ಯಾಕಪ್ ಡಿಲೀಟ್ ಮಾಡುತ್ತಿರುತ್ತಾರೆ. ಚಾಟ್ ಬ್ಯಾಕಪ್ ಬೇಕಾದಲ್ಲಿ ಗೂಗಲ್ ಡ್ರೈವ್ ಮತ್ತು ಆ್ಯಪಲ್ ಐಕ್ಲೌಡ್​ಗೆ ಬ್ಯಾಕಪ್ ತೆಗೆದುಕೊಳ್ಳುವ ಆಯ್ಕೆ ಇದೆ. ಕೆಲವರು ಚಾಟ್ ಮಾತ್ರ ಬ್ಯಾಕಪ್ ಇಟ್ಟುಕೊಂಡರೆ, ಮತ್ತೆ ಕೆಲವರು ಫೋಟೊ, ವಿಡಿಯೊ ಹೀಗೆ ಎಲ್ಲವನ್ನೂ ಬ್ಯಾಕಪ್​ನಲ್ಲಿ ಇಟ್ಟುಕೊಳ್ಳುತ್ತಾರೆ. ಅದಕ್ಕೆ ಹೆಚ್ಚಿನ ಡ್ರೈವ್ ಸ್ಥಳ ಬೇಕಾಗುತ್ತದೆ. ಆದರೆ, ಮುಂದೆ ಬ್ಯಾಕಪ್ ಇಟ್ಟುಕೊಳ್ಳುವವರು ನಿಗದಿತ ಉಚಿತ ಮಿತಿಯ ಬಳಿಕ ಹೆಚ್ಚಿನ ಹಣ ಪಾವತಿಸುವುದು ಅನಿವಾರ್ಯವಾಗಬಹುದು.