Video: ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ

Updated on: Aug 07, 2025 | 2:12 PM

ಮಕ್ಕಳಿಗೆ ತಂದೆಯೇ ಹೀರೋ, ಅವರು ಮಾಡುವ ಪ್ರತಿ ಕೆಲಸವೂ ಮಕ್ಕಳಿಗೆ ಎಲ್ಲರಿಗಿಂತ ಭಿನ್ನವಾಗಿಯೇ ಕಾಣುತ್ತದೆ. ಮಕ್ಕಳಿಗೆ ಅಪಾಯ ಎದುರಾಗುತ್ತಿದೆ ಎಂದಾಗ ಯಾವ ತಂದೆಯೂ ಸುಮ್ಮನೆ ಕೂರಲಾರ. ಹಾಗೆಯೇ ಎರಡು ವರ್ಷದ ಮಗುವಿನ ಮೇಲೆ ದಾಳಿ ಮಾಡಲು ಬಂದಿದ್ದ ನಾಯಿಯಿಂದ ತಂದೆಯೊಬ್ಬ ತನ್ನ ಮಗುವನ್ನು ಕಾಪಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಗುಜರಾತ್​​ನ ಅಮ್ರೇಲಿಯಲ್ಲಿ ನಡೆದಿದೆ

ಮಕ್ಕಳಿಗೆ ತಂದೆಯೇ ಹೀರೋ, ಅವರು ಮಾಡುವ ಪ್ರತಿ ಕೆಲಸವೂ ಮಕ್ಕಳಿಗೆ ಎಲ್ಲರಿಗಿಂತ ಭಿನ್ನವಾಗಿಯೇ ಕಾಣುತ್ತದೆ. ಮಕ್ಕಳಿಗೆ ಅಪಾಯ ಎದುರಾಗುತ್ತಿದೆ ಎಂದಾಗ ಯಾವ ತಂದೆಯೂ ಸುಮ್ಮನೆ ಕೂರಲಾರ. ಹಾಗೆಯೇ ಎರಡು ವರ್ಷದ ಮಗುವಿನ ಮೇಲೆ ದಾಳಿ ಮಾಡಲು ಬಂದಿದ್ದ ನಾಯಿಯಿಂದ ತಂದೆಯೊಬ್ಬ ತನ್ನ ಮಗುವನ್ನು ಕಾಪಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಗುಜರಾತ್​​ನ ಅಮ್ರೇಲಿಯಲ್ಲಿ ನಡೆದಿದೆ.

ಮಗು ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು, ಆದರೆ ನಾಯಿ ಹೊಂಚುಹಾಕಿ ಸದ್ದಿಲ್ಲದೆ ಕುಳಿತಿತ್ತು. ಬಳಿಕ ಇದ್ದಕ್ಕಿದ್ದಂತೆ ಮಗುವಿನ ಮೇಲೆ ದಾಳಿ ನಡೆಸಿತು. ಬಾಲಕ ಕಿರುಚುತ್ತಿದ್ದಂತೆ ತಂದೆ ಸೆಕೆಂಡುಗಳಲ್ಲಿ ಅಲ್ಲಿಗೆ ಓಡಿ ಬಂದು ನಾಯಿಯ ಹಿಡಿತದಿಂದ ತಪ್ಪಿಸಿದ್ದಾರೆ. ಮಗುವನ್ನು ತಕ್ಷಣ ಚಿಕಿತ್ಸೆಗಾಗಿ ಚಿತಾಲ್‌ನಲ್ಲಿರುವ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಮಗುವಿಗೆ ಗಾಯಗಳಾಗಿದ್ದರೂ ಬೇರೆ ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಮತ್ತು ಪ್ರದೇಶದಲ್ಲಿ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ