ದೈವಾದೀನರಾದ್ರೆ ದೇವರ ಪೂಜೆ ಯಾವಾಗ ಮಾಡಬೇಕು?

|

Updated on: May 30, 2024 | 7:06 AM

ಕುಟುಂಬದಲ್ಲಿ ಯಾರಾದ್ರು ತೀರ್ಕೊಂಡ್ರೆ, ಮೃತಪಟ್ಟರೆ ಎಷ್ಟು ದಿನಗಳ ಕಾಲ ಮನೆಗೆ ಸೂತಕ ಇರುತ್ತೆ, ಎಷ್ಟು ದಿನಗಳ ಕಾಲ ಕುಟುಂಬಸ್ಥರು ದೇವರ ಪೂಜೆ, ದೇವಸ್ಥಾನಕ್ಕೆ ಹೋಗದೇ ಇರಬೇಕು? ಯಾವ ಯಾವ ಆಚರಣೆಗಳು, ಪೂಜೆಗಳನ್ನು ಮಾಡಬೇಕು ಎಂಬ ಬಗ್ಗೆ ಬಸವರಾಜ ಗುರೂಜಿ ಈ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ.

ನಮ್ಮ ಜೀವನ ಕೆಲವು ಕಟ್ಟುಪಾಡುಗಳನ್ನು ಅನುಸರಿಸುತ್ತಾ ಬಂದಿದೆ. ಈ ಆಚರಣೆಗಳು ನಮ್ಮ ಮನಶಾಂತಿ, ಏಳಿಗೆ, ಯಶಸ್ಸಿನ ಹಾದಿಗೂ ದಾರಿ ದೀಪ. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಇಂದು ಈ ವಿಡಿಯೋದಲ್ಲಿ ದೈವಾದೀನರಾದ್ರೆ ದೇವರ ಪೂಜೆಯಾವಾಗ ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.

ಮನೆಯ ಕುಟುಂಬಸ್ಥರು ಯಾರಾದ್ರು ದೈವಾದೀನರಾದ್ರೆ 10ರಿಂದ11 ದಿನಗಳ ಕಾಲ ಸೂತಕ ಇರುತ್ತೆ. ಹೀಗಾಗಿ 11ನೇ ದಿನ ಮೃತಾಶೌಚ ಮಾಡಬೇಕು. ಅಂದರೆ ಮನೆ, ಮನಸ್ಸು ಶುದ್ದಿ ಮಾಡಿಕೊಳ್ಳುವುದು. 12ನೇ ಸಪಿಂಡೀಕರಣ ಮಾಡಬೇಕು. ಸುಮಾರು 10ರಿಂದ 11 ದಿನಗಳ ಕಾಲ ಮನೆಯ ಸದಸ್ಯರಿಗೆ ಸೂತಕ ಇರುತ್ತೆ. ಇನ್ನು ಆ ಮನೆಯಿಂದ ಮದುವೆಯಾಗಿ ಹೋದ ಹೆಣ್ಣುಮಗುವಿಗೆ 3ದಿನ ಸೂತಕ ಇರುತ್ತೆ. ಮತ್ತಷ್ಟು ವಿವರಣೆಯನ್ನು ವಿಡಿಯೋದಲ್ಲಿ ತಿಳಿದುಕೊಳ್ಳಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:59 am, Thu, 30 May 24

Follow us on