‘ಗೋವಾದಲ್ಲಿ ನಾನು ತಪ್ಪು ಮಾಡಿಲ್ಲ, ಅವರು ಹೇಳೋದೆಲ್ಲ ಸುಳ್ಳು’: ಆಂತರ್ಯ ಸತೀಶ್​

‘ಗೋವಾದಲ್ಲಿ ನಾನು ತಪ್ಪು ಮಾಡಿಲ್ಲ, ಅವರು ಹೇಳೋದೆಲ್ಲ ಸುಳ್ಳು’: ಆಂತರ್ಯ ಸತೀಶ್​

Malatesh Jaggin
| Updated By: ಮದನ್​ ಕುಮಾರ್​

Updated on: May 29, 2024 | 11:03 PM

ಒಂದೆಡೆ ಕನ್ನಡ ಚಿತ್ರರಂಗ ಸಂಕಷ್ಟದಲ್ಲಿದೆ. ಇನ್ನೊಂದೆಡೆ ಸ್ಯಾಂಡಲ್​ವುಡ್​ನ ನಿರ್ಮಾಪಕರು ಗೋವಾಗೆ ತೆರಳಿ, ಪಾರ್ಟಿ ಮಾಡಿ, ಗಲಾಟೆ ಮಾಡಿಕೊಂಡು ಸುದ್ದಿ ಆಗಿದ್ದಾರೆ. ಈ ವಿವಾದದಲ್ಲಿ ಆಂತರ್ಯ ಸತೀಶ್​ ಮೇಲೆ ಕೆಲವು ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಅವರು ‘ಟಿವಿ9 ಕನ್ನಡ’ಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ತಪ್ಪು ಮಾಡಿಲ್ಲ’ ಎಂದು ಅವರು ಹೇಳಿದ್ದಾರೆ.

ಗೋವಾದಲ್ಲಿ ಪಾರ್ಟಿ ಮಾಡುವ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ (Kannada Film Industry) ಕೆಲವು ನಿರ್ಮಾಪಕ ನಡುವೆ ಜಗಳ ಆಗಿದೆ. ಎ. ಗಣೇಶ್​ (A Ganesh) ಮೇಲೆ ಆಂತರ್ಯ ಸತೀಶ್​ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಇದೆ. ಈ ಬಗ್ಗೆ ಆಂತರ್ಯ ಸತೀಶ್​ ಮಾತನಾಡಿದ್ದಾರೆ. ‘ನಾನು ಯಾವುದೇ ಕಾರಣಕ್ಕೂ ತಪ್ಪು ಮಾಡಿಲ್ಲ. ಯಾರ ಮೇಲೂ ನಾನು ಹಲ್ಲೆ ಮಾಡಿಲ್ಲ. ಸಿಸಿಟಿವಿ ದೃಶ್ಯಗಳನ್ನು ತೆಗೆಸಲಿ. ಯಾರು ಮೊದಲು ಪ್ರಚೋದನೆ ಮಾಡಿದರು? ಯಾರು ಮೊದಲು ಕೈ ಎತ್ತಿದರು ಎಂಬುದು ತಿಳಿಯುತ್ತದೆ. ನಾನು ಚುಚ್ಚಿಲ್ಲ. ಅದೆಲ್ಲ ಶುದ್ಧ ಸುಳ್ಳು. ಮೋಸ ಇರುವುದೇ ಅವರಲ್ಲಿ. ಎ. ಗಣೇಶ್​ ಮತ್ತು ರಥಾವರ ಮಂಜುನಾಥ್​ ಅವರು ಏಕಾಏಕಿ ಬಂದು ನನ್ನ ಬಳಿ ಕೆಟ್ಟದಾಗಿ ಮಾತನಾಡಿದರು. ನಾನು ಹೊಡೆಯೋಕೆ ಹೋಗಿಲ್ಲ. ನೂಕಾಡಿದ್ದಾನೆ ಅಷ್ಟೇ. ಎನ್​.ಎಂ. ಸುರೇಶ್​ ಅವರು ಬಿಡಿಸೋಕೆ ಬಂದರು. ಇದು ಗಲಾಟೆ, ಹೊಡೆದಾಟ ಅಲ್ಲ’ ಎಂದು ಆಂತರ್ಯ ಸತೀಶ್​ (Antharya Sathish) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.