‘ನಾನು ಕೈ ಎತ್ತಿಲ್ಲ, ಅವರೇ ಬಿದ್ದರು’: ನಿರ್ಮಾಪಕರ ಗೋವಾ ಗಲಾಟೆ ಬಗ್ಗೆ ಆಂತರ್ಯ ಸತೀಶ್ ಪ್ರತಿಕ್ರಿಯೆ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಇತ್ತೀಚೆಗೆ ಗೋವಾಗೆ ತೆರಳಿದ್ದರು. ಈ ವೇಳೆ ನಿರ್ಮಾಪಕರ ನಡುವೆ ಗಲಾಟೆ ಆಗಿದೆ. ಆಂತರ್ಯ ಸತೀಶ್ ಅವರು ಎ. ಗಣೇಶ್ ಮತ್ತು ರಥಾವರ ಮಂಜು ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಇದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಆಂತರ್ಯ ಸತೀಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕ ಫಿಲ್ಮ್ ಚೇಂಬರ್ (Karnataka Film Chamber of Commerce) ಪದಾಧಿಕಾರಿಗಳು ಕೆಲವೇ ದಿನಗಳ ಹಿಂದೆ ಗೋವಾಗೆ ತೆರಳಿದ್ದರು. ಎಲ್ಲರೂ ಒಟ್ಟಾಗಿ ಇರುವ ಸಂದರ್ಭದಲ್ಲಿ ಕೆಲವು ನಿರ್ಮಾಪಕರ ನಡುವೆ ಮಾತಿನ ಚಕಮಕಿ ನಡೆಯಿತು. ಪಾರ್ಟಿ ನಡೆಯುವ ಸಂದರ್ಭದಲ್ಲಿ ಎ. ಗಣೇಶ್ (A Ganesh) ಹಾಗೂ ರಥಾವರ ಮಂಜುನಾಥ್ ಮೇಲೆ ಆಂತರ್ಯ ಸತೀಶ್ ಅವರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ. ತಮ್ಮ ಮೇಲಿನ ಆರೋಪಕ್ಕೆ ಈಗ ಆಂತರ್ಯ ಸತೀಶ್ ಅವರು ಪ್ರತಿಕ್ರಿಯಿಸಿದ್ದಾರೆ. ‘ಗೋವಾ ಟ್ರಿಪ್ನಲ್ಲಿ ಪಾರ್ಟಿ ಮಾಡುವಾಗ ನಾನು ಡ್ಯಾನ್ಸ್ ಮಾಡುತ್ತಿದ್ದೆ. ಅವರು ಏಕಾಏಕಿ ಬಂದು ನನಗೆ ಬೈಯ್ದರು. ರಥಾವರ ಮಂಜುನಾಥ್ ಮತ್ತು ಎ. ಗಣೇಶ್ ಅವರು ನನ್ನನ್ನು ರೇಗಿಸಿದರು. ಆಗ ಅವರು ಚೆನ್ನಾಗಿ ಕುಡಿದಿದ್ದರು. ನಾನು ಅವರ ಮೇಲೆ ಕೈ ಎತ್ತಿಲ್ಲ. ನೂಕಾಟದಲ್ಲಿ ಅವರೇ ಕೆಳಗಡೆ ಬಿದ್ದರು. ಅವರವರೇ ತಳ್ಳಾಟ ಆಡಿದರು. ಅವರು ಹೇಳುತ್ತಿರುವುದೆಲ್ಲ ಸುಳ್ಳು. ಸಿಸಿಟಿವಿ ದೃಶ್ಯ ತೆಗೆಸಿ ನೋಡಿದರೆ ಗೊತ್ತಾಗುತ್ತದೆ’ ಎಂದು ಆಂತರ್ಯ ಸತೀಶ್ (Antharya Sathish) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.