ರಮೇಶ್ ಕುಮಾರ್ಗೆ ಎಂಎಲ್ಸಿ ಸ್ಥಾನ ಕೊಡ್ಬೇಕು; ಕಾಂಗ್ರೆಸ್ನಲ್ಲಿ ಹೆಚ್ಚಾಯ್ತು ಒತ್ತಡ
ಮಾಜಿ ಸ್ಪೀಕರ್ ರಮೇಶ್ ಕುಮಾರ್(Ramesh Kumar) ಅವರಿಗೆ ವಿಧಾನಪರಿಷತ್(MLC) ಸದಸ್ಯ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಪಾಳಯದಲ್ಲಿ ಒತ್ತಾಯ ಹೆಚ್ಚಾಗಿದೆ. ಈ ಕುರಿತು ಕೋಲಾರದಲ್ಲಿ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್, ‘ರಮೇಶ್ ಕುಮಾರ್ ಅವರಿಗೆ ಎಂಎಲ್ಸಿ ಕೊಡುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಳಿ ಕೇಳಿದ್ದೇವೆ, ಕೋಲಾರ-ಚಿಕ್ಕಬಳ್ಳಾಪುರ ಎರಡು ಜಿಲ್ಲೆಯ ಶಾಸಕರು ಹೋಗಿ ಮನವಿ ಮಾಡಿದ್ದೇವೆ ಎಂದರು.
ಕೋಲಾರ, ಮೇ.29: ಮಾಜಿ ಸ್ಪೀಕರ್ ರಮೇಶ್ ಕುಮಾರ್(Ramesh Kumar) ಅವರಿಗೆ ವಿಧಾನಪರಿಷತ್(MLC) ಸದಸ್ಯ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಪಾಳಯದಲ್ಲಿ ಒತ್ತಾಯ ಹೆಚ್ಚಾಗಿದೆ. ಈ ಕುರಿತು ಕೋಲಾರದಲ್ಲಿ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್, ‘ರಮೇಶ್ ಕುಮಾರ್ ಅವರಿಗೆ ಎಂಎಲ್ಸಿ ಕೊಡುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಳಿ ಕೇಳಿದ್ದೇವೆ, ಕೋಲಾರ-ಚಿಕ್ಕಬಳ್ಳಾಪುರ ಎರಡು ಜಿಲ್ಲೆಯ ಶಾಸಕರು ಹೋಗಿ ಮನವಿ ಮಾಡಿದ್ದೇವೆ. ಮಾಜಿ ಸಚಿವ ಶ್ರೀನಿವಾಸಗೌಡ ಅವರು ಕೂಡ ವಿಧಾನಪರಿಷತ್ ಸದಸ್ಯರಾಗಲೂ ಅರ್ಹರಿದ್ದಾರೆ. ಅವರಿಗೆ ಕೊಟ್ಟರೂ ನಾವು ಸ್ವಾಗತ ಮಾಡುತ್ತೇವೆ. ಅವರು ನಮ್ಮ ಪರವಾಗಿ ಕೆಲಸ ಮಾಡಿದ್ದಾರೆ. ಆದರೂ ರಮೇಶ್ ಕುಮಾರ್ ಅವರಿಗೆ ಕೊಡಿ ಎಂದು ಹೈಕಮಾಂಡ್ ಬಳಿ ಮನವಿ ಮಾಡಿದ್ದೇವೆ. ಕೋಲಾರದಲ್ಲಿ ವಿಧಾನಪರಿಷತ್ ಚುನಾವಣೆಯ ಪ್ರಚಾರದ ವೇಳೆ ಕೊತ್ತೂರು ಮಂಜುನಾಥ್ ಹೇಳಿದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos