ಭಾರತ ಒಂದು ಅದ್ಭುತ ದೇಶವಾದರೆ ಪಾಕಿಸ್ತಾನವು ಚೀನಾ ಹೇಳಿದಂತೆ ಕುಣಿಯುವ ದಟ್ಟದರಿದ್ರ ದೇಶ: ವಾಟಾಳ್ ನಾಗರಾಜ್

ಅರುಣ್​ ಕುಮಾರ್​ ಬೆಳ್ಳಿ

Updated on: May 01, 2025 | 5:53 PM

ಪಾಕಿಸ್ತಾನದಲ್ಲಿ ಕೂತು ಬೆನಜೀರ್ ಭುಟ್ಟೋ ಅವರ ಮ ಬಿಲಾವಲ್ ಭಾರತದಲ್ಲಿ ರಕ್ತದ ಕೋಡಿ ಹರಿಸುತ್ತೇವೆ ಅನ್ನುತ್ತಾನೆ, ಅವನಿಗೆ ಇತಿಹಾಸ ಗೊತ್ತಿದ್ದಂತಿಲ್ಲ, ಅವನ ತಾತ ಜುಲ್ಫೀಕರ್ ಅಲಿ ಭುಟ್ಟೋ ಆಗಿನ ಭಾರತದ ಪ್ರಧಾನಿ ಇಂದಿರಾಗಾಂಧಿ ಮುಂದೆ ಕೈ ಜೋಡಿಸಿ ನಿಂತಿದ್ದರು, ಬಿಲಾವಲ್ ಮತ್ತು ಅವನಂಥ ಜನ ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ನಮ್ಮ ಸೈನ್ಯ ತಕ್ಕ ಪಾಠ ಕಲಿಸುತ್ತದೆ ಎಂದು ವಾಟಾಳ್ ಹೇಳಿದರು.

ರಾಮನಗರರ, ಮೇ 1: ಅಧಿಕಾರಕ್ಕೆ ಯಾವುದೇ ಪಕ್ಷ ಬರಲಿ ಆದರೆ ಭಾರತದಂಥ ಸುಂದರವಾದ ದೇಶ ವಿಶ್ವದಲ್ಲಿ ಮತ್ತೊಂದಿಲ್ಲ, ಇದೊಂದು ಅದ್ಭುತ ದೇಶ, ಕಳೆದ 75 ವರ್ಷಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ (democratic system) ಯಾವುದೇ ರೀತಿಯ ಧಕ್ಕೆಯಾಗದಂತೆ ಅದನ್ನು ಭದ್ರವಾಗಿ ಕಾಪಾಡಿಕೊಂಡು ಬಂದಿರುವ ದೇಶ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು. ನಗರದಲ್ಲಿ ಇಂದು ಮಾತಾಡಿದ ಅವರು, ಮಹಾತ್ಮಾ ಗಾಂಧಿಯವರ ಪರಿಶ್ರಮ ಮತ್ತು ಚಿಂತನೆಗಳಿಂದ ಭಾರತ ವಿಶ್ವದಲ್ಲೇ ಅತ್ಯಂತ ಮೇಲಿನ ಸ್ಥಾನದಲ್ಲಿ ಗುರುತಿಸಿಕೊಳ್ಳುವ ದೇಶ, ಪಾಕಿಸ್ತಾನ ದಟ್ಟ ದರಿದ್ರ ದೇಶ ಮತ್ತು ಚೀನಾ ಹೇಳಿದಂತೆ ಕುಣಿಯುತ್ತದೆ, ಅದು ತನ್ನ ಪಾಡಿಗೆ ತಾನಿರುವುದು ಒಳ್ಳೇದು, ಭಾರತದ ತಂಟೆಗೆ ಬಂದರೆ ನಮ್ಮ ಸೈನಿಕರು ಏನು ಮಾಡುತ್ತಾರೆ ಅಂತ ನಮಗಿಂತ ಹೆಚ್ಚು ಪಾಕಿಸ್ತಾನಕ್ಕೆ ಗೊತ್ತು ಎಂದರು.

ಇದನ್ನೂ ಓದಿ:  ಉಗ್ರರ ದಾಳಿ ಬೆನ್ನಲ್ಲೇ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ ಪುನಾರಚನೆ; ಅಧ್ಯಕ್ಷರಾಗಿ ಅಲೋಕ್ ಜೋಶಿ ನೇಮಕ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.