Daily Devotional: ಯಾರು ಬೇಕಾದರೂ ಸನ್ಯಾಸಿ ಆಗಬಹುದಾ?

Updated on: Apr 04, 2026 | 7:08 AM

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ಸನ್ಯಾಸಿ ಆಗಬಹುದಾ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಹಿಂದೂ ಸನಾತನ ಸಂಸ್ಕೃತಿಯಲ್ಲಿ ಸನ್ಯಾಸಿಯಾಗಲು ನಿರ್ದಿಷ್ಟ ವಿಧಿ ವಿಧಾನಗಳು ಮತ್ತು ಕಟ್ಟುಪಾಡುಗಳಿವೆ. ಸನ್ಯಾಸತ್ವವು ಕೇವಲ ಮಠಗಳಿಗೆ ಸೀಮಿತವಲ್ಲ. ಸನ್ಯಾಸಿಯಾಗಲು ಬಯಸುವ ವ್ಯಕ್ತಿಯು ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ಜಯಿಸಿರಬೇಕು.

ಒಬ್ಬ ಸನ್ಯಾಸಿಯು ಕುಟುಂಬ ಸಂಬಂಧಗಳಿಂದ ಮುಕ್ತನಾಗಿರಬೇಕು, ಸುಖ-ದುಃಖಗಳನ್ನು ಸಮತೋಲನದಲ್ಲಿ ಸ್ವೀಕರಿಸುವ ಸಮದೃಷ್ಟಿಯುಳ್ಳವನಾಗಿರಬೇಕು. ಆಹಾರದ ವ್ಯಾಮೋಹವಿಲ್ಲದೆ, ಸಿಕ್ಕಿದ್ದನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸಬೇಕು. ಚಳಿ, ಮಳೆ, ಬಿಸಿಲಿಗೆ ಆತಂಕ ಪಡಬಾರದು. ಸಮಾಜದಿಂದ ದೊರೆತದ್ದನ್ನು ತನ್ನಲ್ಲೇ ಬಚ್ಚಿಡದೆ, ಇತರರಿಗೆ ನೀಡುವ ಮನೋಭಾವ ಇರಬೇಕು. ದುಶ್ಚಟಗಳಿಂದ ದೂರವಿರಬೇಕು. ಪಾದರಕ್ಷೆಗಳು, ಛತ್ರಿ, ಮಂಚ, ತಲೆದಿಂಬು, ಆಭರಣಗಳನ್ನು ತ್ಯಜಿಸಿ, ಸರಳ ಜೀವನ ನಡೆಸಬೇಕು. ಯಾವುದೇ ಪ್ರಾಣಿಗೆ ಹಾನಿ ಮಾಡದೆ, ಕಷ್ಟದಲ್ಲಿರುವವರಿಗೆ ಸ್ಪಂದಿಸಬೇಕು. ಭಗವಂತನ ಆರಾಧನೆಯಲ್ಲಿ ತೊಡಗಿಕೊಂಡು, ವಾಕ್ಶುದ್ಧಿ ಮತ್ತು ಭಗವಂತನ ಕೃಪೆಗೆ ಪಾತ್ರನಾಗುವುದೇ ಸನ್ಯಾಸಿ ಜೀವನದ ನಿಜವಾದ ಮಾರ್ಗ ಎಂದು ಪರಿಗಣಿಸಿದ್ದಾರೆ ಎಂದು ಗುರೂಜಿ ಹೇಳಿದ್ದಾರೆ.

Follow Us
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More