ಫಿನಾಲೆ ತಲುಪಲು ಬಂಪರ್ ಚಾನ್ಸ್ ನೀಡಿದ ಬಿಗ್ ಬಾಸ್; ಇಲ್ಲಿದೆ ನೇರ ಟಿಕೆಟ್
ಈ ಘೋಷಣೆ ಬಳಿಕ ದೊಡ್ಮನೆಯಲ್ಲಿ ಪೈಪೋಟಿ ಜೋರಾಗಿದೆ. ವಿನಯ್ ಗೌಡ, ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್, ತನಿಷಾ ಕುಪ್ಪಂಡ, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಹಾಗೂ ನಮ್ರತಾ ಗೌಡ ನಡುವೆ ಸ್ಪರ್ಧೆ ನಡೆಯುತ್ತಿದೆ. ಯಾರಿಗೆ ಫಿನಾಲೆಯ ಟಿಕೆಟ್ ಸಿಗಲಿದೆ ಎಂಬ ಕೌತುಕ ಮೂಡಿದೆ.
ಇಷ್ಟು ದಿನಗಳ ಕಾಲ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಕಠಿಣ ಸ್ಪರ್ಧೆ ನೀಡಿದ ಎಲ್ಲರಿಗೂ ಫಿನಾಲೆ ತಲುಪಬೇಕು ಎಂಬ ಆಸೆ ಇದೆ. ವೀಕ್ಷಕರಿಂದ ಹೆಚ್ಚು ವೋಟ್ ಸಿಕ್ಕರೆ ಫಿನಾಲೆ ಎಂಟ್ರಿ ಪಡೆಯಬಹುದು. ಅದರ ಜೊತೆಗೆ ಸರ್ಧಿಗಳಿಗೆ ಬಿಗ್ ಬಾಸ್ ಒಂದು ಆಫರ್ ನೀಡಿದ್ದಾರೆ. ‘ಈ ವಾರದ ಟಾಸ್ಕ್ಗಳನ್ನು ಗೆದ್ದು, ವಾರದ ಕೊನೆಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಸದಸ್ಯರ ಪೈಕಿ ಒಬ್ಬರು ಫಿನಾಲೆ (Bigg Boss Finale) ವಾರಕ್ಕೆ ನೇರವಾಗಿ ಟಿಕೆಟ್ ಪಡೆಯುತ್ತಾರೆ’ ಎಂದು ಬಿಗ್ ಬಾಸ್ ಘೋಷಿಸಿದ್ದಾರೆ. ಈ ಘೋಷಣೆ ಬಳಿಕ ದೊಡ್ಮನೆಯಲ್ಲಿ ಪೈಪೋಟಿ ಜೋರಾಗಿದೆ. ಇದರ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ಹಂಚಿಕೊಂಡಿದೆ. ‘ಜಿಯೋ ಸಿನಿಮಾ’ದಲ್ಲಿ ಉಚಿತವಾಗಿ ಬಿಗ್ ಬಾಸ್ ಶೋ ನೋಡಬಹುದು. ವಿನಯ್ ಗೌಡ, ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್, ತನಿಷಾ ಕುಪ್ಪಂಡ, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಹಾಗೂ ನಮ್ರತಾ ಗೌಡ ನಡುವೆ ಸ್ಪರ್ಧೆ ನಡೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ