Video: ಹೆಂಡತಿ ಸತ್ತಳೆಂದು ಆಕೆಯ ತಂಗಿಯ ಮದುವೆಯಾಗಿ ಈಗ ಇನ್ನೊಬ್ಬ ತಂಗಿಯೂ ಬೇಕೆಂದು ವಿದ್ಯುತ್ ಟವರ್ ಏರಿದ ವ್ಯಕ್ತಿ

Updated on: Aug 30, 2025 | 12:30 PM

ಹೆಂಡತಿ ಸತ್ತಳೆಂದು ಆಕೆಯ ತಂಗಿಯನ್ನು ಮದುವೆ ಮಾಡಿ ಕೊಟ್ಟರೆ, ಆಕೆಯ 17 ವರ್ಷದ ಮತ್ತೊಬ್ಬ ತಂಗಿಯೂ ಬೇಕೆಂದು ವ್ಯಕ್ತಿಯೊಬ್ಬ ಹಠ ಹಿಡಿದು ವಿದ್ಯುತ್ ಟವರ್ ಏರಿ ಕುಳಿತಿರುವ ಘಟನೆ ಉತ್ತರ ಪ್ರದೇಶದ ಕನೌಜ್​​ನಲ್ಲಿ ನಡೆದಿದೆ. ರಾಜ್ ಸಕ್ಸೇನಾ ಮೊದಲು 2021 ರಲ್ಲಿ ಒಬ್ಬ ಮಹಿಳೆಯನ್ನು ಮದುವೆಯಾಗಿದ್ದ, ಆದರೆ ಮರು ವರ್ಷವೇ ಅನಾರೋಗ್ಯದಿಂದ ಆಕೆ ನಿಧನರಾಗಿದ್ದಾರೆ. ನಂತರ ಅವನು ಅವಳ ತಂಗಿಯನ್ನು ಮದುವೆಯಾಗಿದ್ದಾನೆ.

ಕನೌಜ್, ಆಗಸ್ಟ್ 30: ಹೆಂಡತಿ ಸತ್ತಳೆಂದು ಆಕೆಯ ತಂಗಿಯನ್ನು ಮದುವೆ ಮಾಡಿ ಕೊಟ್ಟರೆ, ಆಕೆಯ 17 ವರ್ಷದ ಮತ್ತೊಬ್ಬ ತಂಗಿಯೂ ಬೇಕೆಂದು ವ್ಯಕ್ತಿಯೊಬ್ಬ ಹಠ ಹಿಡಿದು ವಿದ್ಯುತ್ ಟವರ್ ಏರಿ ಕುಳಿತಿರುವ ಘಟನೆ ಉತ್ತರ ಪ್ರದೇಶದ ಕನೌಜ್​​ನಲ್ಲಿ ನಡೆದಿದೆ. ರಾಜ್ ಸಕ್ಸೇನಾ ಮೊದಲು 2021 ರಲ್ಲಿ ಒಬ್ಬ ಮಹಿಳೆಯನ್ನು ಮದುವೆಯಾಗಿದ್ದ, ಆದರೆ ಮರು ವರ್ಷವೇ ಅನಾರೋಗ್ಯದಿಂದ ಆಕೆ ನಿಧನರಾಗಿದ್ದಾರೆ. ನಂತರ ಅವನು ಅವಳ ತಂಗಿಯನ್ನು ಮದುವೆಯಾಗಿದ್ದಾನೆ.

ಎರಡು ವರ್ಷಗಳ ಮದುವೆಯ ನಂತರ, ಸಕ್ಸೇನಾ ಈಗ ಮತ್ತೊಬ್ಬ ತಂಗಿಯ ಮೇಲೂ ಕಣ್ಣು ಹಾಕಿದ್ದು, ಆಕೆಗಿನ್ನು 17 ವರ್ಷ ವಯಸ್ಸು. ಆಕೆಯನ್ನು ಮದುವೆ ಮಾಡಿ ಕೊಡಿ ಎಂದು ಹಠ ಹಿಡಿದು ವಿದ್ಯುತ್ ಟವರ್ ಏರಿದ್ದಾನೆ.ಪೊಲೀಸರು ಮತ್ತು ಕುಟುಂಬ ಸದಸ್ಯರು ಅವರನ್ನು ಸಮಾಧಾನಪಡಿಸಲು ಸುಮಾರು ಏಳು ಗಂಟೆಗಳ ಕಾಲ ಪ್ರಯತ್ನಿಸಿದ್ದರು. ಆತನ ಬೇಡಿಕೆಗೆ ಒಪ್ಪಿಕೊಂಡ ನಂತರ ಆತ ಕೆಳಗಿಳಿದಿದ್ದಾನೆ. ಈಗ ಈ ವಿಷಯದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Aug 30, 2025 12:30 PM