Assembly Polls: ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ವರಿಷ್ಠರು ಹೇಳೋದನ್ನು ಶಿರಸಾವಹಿಸಿ ಪಾಲಿಸುತ್ತೇನೆ: ನಿಖಿಲ್ ಕುಮಾರಸ್ವಾಮಿ
ರಾಮನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಬಗ್ಗೆ ನಿಖಿಲ್, ಅದು ಪಕ್ಷದ ವರಿಷ್ಠರ ನಿರ್ಧಾರ, ಹೈಕಮಾಂಡ್ ಹೇಳಿದ್ದನ್ನು ಪಾಲಿಸುತ್ತಿದ್ದೇನೆ ಎಂದು ಹೇಳಿದರು.
ಮಂಡ್ಯ: ಮಂಡ್ಯ ಲೋಕ ಸಭಾ ಕ್ಷೇತ್ರಕ್ಕೆ ನಡೆದ ಚುವಾವಣೆ ಸಂದರ್ಭದಲ್ಲಿ ಅಪಕ್ವ ಯುವ ಪುಢಾರಿಯಂತೆ ಮಾತಾಡುತ್ತಿದ್ದ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಪುತ್ರ ನಿಖಿಲ್ ಕುಮಾರಸ್ವಾಮಿಯ (Nikhil Kumaraswamy) ಈಗಿನ ಮಾತುಗಳಲ್ಲಿ ಪ್ರಬುದ್ಧತೆಯನ್ನು ಖಂಡಿತ ಗಮನಿಸಬಹುದು. ಸುಮಲತಾ ಅಂಬರೀಷ್ (Sumalatha Ambareesh), ನಿಖಿಲ್ ರನ್ನು ಅಪ್ರಬುದ್ಧ ರಾಜಕಾರಣಿ ಅಂತ ಕರೆದಿರುವ ಬಗ್ಗೆ ಇಂದು ಮಂಡ್ಯದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಆ ತಾಯಿಯ ಬಗ್ಗೆ ಹಿಂದೆ ಮಾತಾಡಿಲ್ಲ ಇವತ್ತು ಸಹ ಅವರ ಕಾಮೆಂಟ್ ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು. ರಾಮನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಬಗ್ಗೆ ನಿಖಿಲ್, ಅದು ಪಕ್ಷದ ವರಿಷ್ಠರ ನಿರ್ಧಾರ, ಹೈಕಮಾಂಡ್ ಹೇಳಿದ್ದನ್ನು ಪಾಲಿಸುತ್ತಿದ್ದೇನೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 14, 2023 04:23 PM