Karnataka Assembly Polls: ಬಿಜೆಪಿ ಶಾಸಕ ಎಮ್ ಪಿ ರೇಣುಕಾಚಾರ್ಯ ಹೊನ್ನಾಳಿ ಕ್ಷೇತ್ರದ ಜಾತ್ರೆಗಳಲ್ಲಿ ಪಾಲ್ಗೊಂಡು ಡೊಳ್ಳು-ತಮಟೆ ಬಾರಿಸುತ್ತಿದ್ದಾರೆ
ಹೊನ್ನಾಳಿ ಕ್ಷೇತ್ರದ ಶಾಸಕ ಎಮ್ ಪಿ ರೇಣುಕಾಚಾರ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲ ಜಾತ್ರೆಗಳಲ್ಲಿ ಭಾಗವಹಿಸುತ್ತಿದ್ದಾರೆ, ದೇವರಿಗೆ ನಮಸ್ಕರಿಸಿ ಚುನಾವಣೆಯಲ್ಲಿ ಒಳ್ಳೆಯದಾಗಲು ಪ್ರಾರ್ಥಿಸುತ್ತಿದ್ದಾರೆ.
ದಾವಣಗೆರೆ: ಚುನಾವಣೆಗಳ (elections) ವಿಶೇಷತೆಯೇ ಅದು. ಈ ಸಮಯದಲ್ಲಿ ರಾಜಕೀಯ ನಾಯಕರಿಗೆ ತಮ್ಮ ಕ್ಷೇತ್ರದ ಜನಗಳ ಮೇಲೆ ಭಯಂಕರ ಪ್ರೀತಿ ಹುಟ್ಟಿಬಿಡುತ್ತದೆ. ಕ್ಷೇತ್ರದಲ್ಲಿ ಎಲ್ಲೇ ಜಾತ್ರೆ ನಡೆಯುತ್ತಿದ್ದರೂ ಹೋಗಿ ಅಲ್ಲಿನ ದೇವರಿಗೆ ನಮಸ್ಕರಿಸುತ್ತಾರೆ, ಜನರೊಂದಿಗೆ ಸೇರಿ ತೇರು ಎಳೆಯುತ್ತಾರೆ. ಜಿಲ್ಲೆಯ ಹೊನ್ನಾಳಿ (Honnali) ಕ್ಷೇತ್ರದ ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya) ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲ ಜಾತ್ರೆಗಳಲ್ಲಿ ಭಾಗವಹಿಸುತ್ತಿದ್ದಾರೆ, ದೇವರಿಗೆ ನಮಸ್ಕರಿಸಿ ಚುನಾವಣೆಯಲ್ಲಿ ಒಳ್ಳೆಯದಾಗಲು ಪ್ರಾರ್ಥಿಸುತ್ತಿದ್ದಾರೆ. ಜಾತ್ರೆಗಳಲ್ಲಿ ಸಾಮಾನ್ಯವಾಗಿ ಬಳಸುವ ಡೊಳ್ಳು ತಮಟೆಗಳನ್ನು ಬಾರಿಸುತ್ತಾ ಜನರನ್ನು ರಂಜಿಸುತ್ತಿದ್ದಾರೆ. ಬಿಜೆಪಿ ಅವರಿಗೆ ಪುನಃ ಅದೇ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡುವ ಬಗ್ಗೆ ಯಾವುದೇ ಸಂಶಯವಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us