WITT Tv9 Global Summit 2024: ‘ಕಳೆದ 10 ವರ್ಷಗಳು ಭಾರತೀಯ ಕ್ರೀಡೆಗೆ ಸುವರ್ಣ ಯುಗ’; ಪುಲ್ಲೇಲ ಗೋಪಿಚಂದ್

|

Updated on: Feb 25, 2024 | 7:03 PM

WITT Tv9 Global Summit 2024: ಕ್ರೀಡೆಗೆ ಸಂಬಂಧಿಸಿದ ಮೊದಲ ಸೆಷನ್​ನಲ್ಲಿ ಮಾತನಾಡಿದ ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ ಮತ್ತು ಪ್ರಸ್ತುತ ರಾಷ್ಟ್ರೀಯ ತರಬೇತುದಾರ ಪುಲ್ಲೇಲ ಗೋಪಿಚಂದ್, ‘ಸುದ್ದಿವಾಹಿನಿಯೊಂದು ಕ್ರೀಡೆಯೊಂದಿಗೆ ತನ್ನ ಮೊದಲ ಶೃಂಗಸಭೆಯನ್ನು ಪ್ರಾರಂಭಿಸುತ್ತಿರುವುದು ಬಹುಶಃ ಇದೇ ಮೊದಲು... ಕಳೆದ 10 ವರ್ಷಗಳು ಭಾರತದ ಕ್ರೀಡೆಗಳಿಗೆ ಪಾಲಿಗೆ ಸುವರ್ಣ ವರ್ಷಗಳಾಗಿವೆ ಎಂದರು.

ದೇಶದ ಅತಿದೊಡ್ಡ ಸುದ್ದಿ ನೆಟ್‌ವರ್ಕ್ ಟಿವಿ9 ಸುದ್ದಿ ವಾಹಿನಿ ಆಯೋಜಿಸಿರುವ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಜಾಗತಿಕ ಶೃಂಗಸಭೆ 2024ಕ್ಕೆ (WITT Tv9 Global Summit 2024) ಇಂದಿನಿಂದ ಅದ್ಧೂರಿ ಚಾಲನೆ ಸಿಕ್ಕಿದೆ. ಮೂರು ದಿನಗಳವರೆಗೆ ನಡೆಯುವ ಈ ಜಾಗತಿಕ ಶೃಂಗಸಭೆಯಲ್ಲಿ ಇಂದು ಅಂದರೆ ಫೆಬ್ರವರಿ 25 ಮತ್ತು 26 ರಂದು ಮನರಂಜನೆ, ಕ್ರೀಡೆ, ಆರೋಗ್ಯ, ಆರ್ಥಿಕತೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಅನೇಕ ಸೆಷನ್‌ಗಳು ಇರುತ್ತವೆ. ಅದರಂತೆ ಇಂದು ನಡೆದ ಕ್ರೀಡೆಗೆ ಸಂಬಂಧಿಸಿದ ಮೊದಲ ಸೆಷನ್​ನಲ್ಲಿ ಮಾತನಾಡಿದ ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ ಮತ್ತು ಪ್ರಸ್ತುತ ರಾಷ್ಟ್ರೀಯ ತರಬೇತುದಾರ ಪುಲ್ಲೇಲ ಗೋಪಿಚಂದ್ (Pullela Gopichand), ‘ಸುದ್ದಿವಾಹಿನಿಯೊಂದು ಕ್ರೀಡೆಯೊಂದಿಗೆ ತನ್ನ ಮೊದಲ ಶೃಂಗಸಭೆಯನ್ನು ಪ್ರಾರಂಭಿಸುತ್ತಿರುವುದು ಬಹುಶಃ ಇದೇ ಮೊದಲು… ಕಳೆದ 10 ವರ್ಷಗಳು ಭಾರತದ ಕ್ರೀಡೆಗಳಿಗೆ ಪಾಲಿಗೆ ಸುವರ್ಣ ವರ್ಷಗಳಾಗಿವೆ. ಹಿಂದೆಂದೂ ದೇಶದ ಪ್ರಧಾನಿ ಕ್ರೀಡೆಯ ಬಗ್ಗೆ ಇಷ್ಟೊಂದು ಮಾತನಾಡಿಲ್ಲ. ಖೇಲೋ ಇಂಡಿಯಾದಂತಹ ಕಾರ್ಯಕ್ರಮಗಳು ದೇಶದ ಮಕ್ಕಳು ಮತ್ತು ಅವರ ಪೋಷಕರಿಗೆ ಕ್ರೀಡಾ ಜಗತ್ತಿನಲ್ಲಿ ಯಶಸ್ವಿಯಾಗುವ ಕನಸನ್ನು ತೋರಿಸಿವೆ. ಮಕ್ಕಳು ಅಧ್ಯಯನವನ್ನು ಬಿಟ್ಟು ಕ್ರೀಡೆಗಳತ್ತ ಗಮನ ಹರಿಸುತ್ತಿದ್ದಾರೆ, ಆದರೆ ಇದು ಕಳವಳಕಾರಿ ಸಂಗತಿಯಾಗಿದೆ. ಏಕೆಂದರೆ ಕ್ರೀಡೆಯಲ್ಲಿ ಅವಕಾಶಗಳು ಸೀಮಿತವಾಗಿವೆ. ಒಂದು ವೇಳೆ ನೀವು 21 ನೇ ವಯಸ್ಸಿನಲ್ಲಿ ಕ್ರೀಡೆಯಲ್ಲಿ ಫೇಲ್ ಆದರೆ ಶಿಕ್ಷಣದ ಕಡೆ ಗಮನಹರಿಸುವುದು ಒಳ್ಳೆಯದು ಎಂದು ನಾನು ಬಾವಿಸುತ್ತೇನೆ ಎಂದರು.

Published on: Feb 25, 2024 07:00 PM