WITT Inauguration: ಟಿವಿ9 ನೆಟ್ವರ್ಕ್ ಸಿಇಒರಿಂದ ಡಬ್ಲ್ಯುಐಟಿಟಿ ಶೃಂಗಸಭೆಗೆ ಚಾಲನೆ; ಭಾರತದ ಸಾಫ್ಟ್​ಪವರ್, ಸ್ಯಾಂಡಲ್ವುಡ್ ಪವರ್ ಉಲ್ಲೇಖ

TV9 Network MD & CEO Barun Das: ಟಿವಿ9 ನೆಟ್ವರ್ಕ್ ಆಯೋಜಿಸಿರುವ 'ವಾಟ್ ಇಂಡಿಯಾ ಥಿಂಕ್ಸ್ ಟುಡೇ' ಜಾಗತಿಕ ಶೃಂಗಸಭೆಯ ಎರಡನೇ ಆವೃತ್ತಿ ಇಂದು ಚಾಲನೆಗೊಂಡಿದೆ. ಮೂರು ದಿನಗಳ ಕಾಲ ನಡೆಯುವ ಈ ಸಮಾವೇಶದಲ್ಲಿ ಇವತ್ತು ಕರ್ಟನ್ ರೈಸರ್ ಇದೆ. ಭಾರತದ ಸಾಫ್ಟ್ ಪವರ್ ಬಗ್ಗೆ ಚರ್ಚೆ ನಡೆಯಲಿದೆ. ಹಾಗೆಯೇ, ನಕ್ಷತ್ರ ಸಮ್ಮಾನ್ ಕಾರ್ಯಕ್ರಮ ನಡೆಯುತ್ತದೆ. ಇವತ್ತು ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುಣ್ ದಾಸ್ ಉದ್ಘಾಟನಾ ಭಾಷಣ ಮಾಡಿದರು.

WITT Inauguration: ಟಿವಿ9 ನೆಟ್ವರ್ಕ್ ಸಿಇಒರಿಂದ ಡಬ್ಲ್ಯುಐಟಿಟಿ ಶೃಂಗಸಭೆಗೆ ಚಾಲನೆ; ಭಾರತದ ಸಾಫ್ಟ್​ಪವರ್, ಸ್ಯಾಂಡಲ್ವುಡ್ ಪವರ್ ಉಲ್ಲೇಖ
ಬರುಣ್ ದಾಸ್
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 25, 2024 | 5:37 PM

ದೇಶದ ಅತಿದೊಡ್ಡ ಸುದ್ದಿ ನೆಟ್‌ವರ್ಕ್ ಟಿವಿ9 ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಜಾಗತಿಕ ಶೃಂಗಸಭೆ 2024 (What India Thinks Today Global Summit) ಇಂದು ಭಾನುವಾರ ಪ್ರಾರಂಭವಾಯಿತು. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಬರುಣ್ ದಾಸ್ (Barun Das) ಶಾಲು ಹೊದಿಸಿ ಸ್ವಾಗತಿಸಿದರು. ಅತಿಥಿಗಳನ್ನು ಸ್ವಾಗತಿಸಿದ ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುಣ್ ದಾಸ್, ಮುಂದಿನ ಎರಡು ದಿನಗಳ ಕಾಲ ವಿವಿಧ ವಲಯದ ಗಣ್ಯರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಮತ್ತು ನರೇಂದ್ರ ಮೋದಿ ಅವರು ಸೋಮವಾರ ರಾತ್ರಿ 8 ಗಂಟೆಗೆ ಭಾಷಣ ಮಾಡಲಿರುವ ಸಂಗತಿಯನ್ನು ತಿಳಿಸಿದರು. ಹಾಗೆಯೇ, ಇಂದು ವಾಟ್ ಇಂಡಿಯಾ ಥಿಂಕ್ಸ್ ಟುಡೇ ಸಮಿಟ್​ನ ಕರ್ಟನ್ ರೈಸರ್​ನಲ್ಲಿ ಸಾಫ್ಟ್ ಪವರ್ ವಿಚಾರದ ಬಗ್ಗೆ ಚರ್ಚೆ ನಡೆಯಲಿರುವ ವಿಚಾರವನ್ನೂ ತಿಳಿಸಿದರು.

ಸಾಫ್ಟ್ ಪವರ್ ಎಂದರೇನು?

‘ಈಗೀಗ ಸಾಫ್ಟ್ ಪವರ್ ಪದಬಳಕೆಯನ್ನು ಹೆಚ್ಚು ಕೇಳುತ್ತಿರಬಹುದು. ಒಂದು ದೇಶದ ಸಾಫ್ಟ್ ಪವರ್ ಎಂದರೆ ತನ್ನ ದೃಷ್ಟಿಕೋನವನ್ನು ಬಲಪೂರ್ವಕವಿಲ್ಲದೇ ಮನವೊಲಿಕೆ ಮೂಲಕ ಇನ್ನೊಂದು ದೇಶ ಒಪ್ಪಿಕೊಳ್ಳುವಂತೆ ಮಾಡುವುದು ಎಂದು ಅಮೆರಿಕದ ರಾಜಕೀಯ ವಿಜ್ಞಾನಿ ಜೋಸೆಫ್ ನೈ ಅವರು ವ್ಯಾಖ್ಯಾನಿಸುತ್ತಾರೆ’ ಎಂದು ಟಿವಿ9 ನೆಟ್ವರ್ಕ್​ನ ಎಂಡಿ ಮತ್ತು ಸಿಇಒ ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು.

ಇದನ್ನೂ ಓದಿ: ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಕಾರ್ಯಕ್ರಮಕ್ಕೆ ಚಾಲನೆ, ನೇರಪ್ರಸಾರ​​​ ಇಲ್ಲಿದೆ ನೋಡಿ

ಸ್ಯಾಂಡಲ್ವುಡ್ ಪ್ರಭಾವ ಉಲ್ಲೇಖಿಸಿದ ಬರುಣ್ ದಾಸ್

“ಭಾರತವನ್ನು ಯಾವಾಗಲೂ ಯೋಗ, ವೇದಗಳು ಮತ್ತು ಆಯುರ್ವೇದದ ನಾಡು ಎಂದು ಕರೆಯಲಾಗುತ್ತದೆ. ಇತ್ತೀಚೆಗೆ, ಭಾರತವು ಪ್ರಪಂಚದ ಅತ್ಯಂತ ಅದ್ಭುತವಾದ ಸಿನಿಮಾ ಕಥೆಗಳನ್ನು ಹೇಳುವ ದೇಶವಾಗಿ ಕಾಣಲಾರಂಭಿಸಿದೆ. ಬಾಲಿವುಡ್ ಇದೆ… ಆದರೆ ಇತ್ತೀಚೆಗೆ ಸ್ಯಾಂಡಲ್‌ವುಡ್, ಕಾಲಿವುಡ್ ಮತ್ತು ಟಾಲಿವುಡ್‌ನ ಮ್ಯಾಜಿಕ್ ಕೆಲಸ ಮಾಡಲು ಪ್ರಾರಂಭಿಸಿದೆ” ಎಂದು ಹೇಳಿದ ಬರುಣ್ ದಾಸ್ ಅವರು ನಾಟು ನಾಟು ಎಂದು ಹೇಳಿ ಚಪ್ಪಾಳೆದ ಅಲೆ ಎಬ್ಬಿಸಿದರು.

‘ಇದೇ ಸಮಯದಲ್ಲಿ ಕ್ರೀಡಾ ರಾಷ್ಟ್ರವಾಗಿ ನಮ್ಮ ಶಕ್ತಿ ಹೆಚ್ಚುತ್ತಿದೆ. ಕಳೆದ ಕೆಲವು ದಶಕಗಳಿಂದ ನಮ್ಮ ಕ್ರಿಕೆಟಿಗರು ನಿರಂತರವಾಗಿ ಗರ್ವ ಪಡುವಂತೆ ಮಾಡುತ್ತಿದ್ದಾರೆ. ಇದಲ್ಲದೇ ಭಾರತ ತನ್ನ ಛಾಪು ಮೂಡಿಸುತ್ತಿರುವ ಹಲವು ಕ್ರೀಡೆಗಳೂ ಇವೆ. ಕೆಲವು ಅಸಾಧಾರಣ ಕ್ರೀಡಾ ತಾರೆಗಳ ಗಟ್ಟಿತನ, ಮಹತ್ವಾಕಾಂಕ್ಷೆ ಮತ್ತು ದೃಢತೆ ಮತ್ತು ನಮ್ಮ ಪ್ರಧಾನಿಯವರ ದೂರದೃಷ್ಟಿ ಮತ್ತು ನಮ್ಮ ಕ್ರೀಡಾ ಸಚಿವರ ದಕ್ಷ ಆಡಳಿತಕ್ಕೆ ಧನ್ಯವಾದಗಳು…’ ಎಂದು ಅನುರಾಗ್ ಠಾಕೂರ್ ಅವರಿಗೆ ಬರುಣ್ ದಾಸ್ ಧನ್ಯವಾದ ಹೇಳಿದರು.

ಇದನ್ನೂ ಓದಿ: ಮೋದಿ ಸರ್ಕಾರದ ಡಿಜಿಟಲ್ ಯೋಜನೆ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುತ್ತದೆ: ಅಭಯ್ ಭೂತಾಡ

‘ಭಾರತವು ಈಗ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವಂತೆ… ಜಾಗತಿಕ ಮಟ್ಟದಲ್ಲಿ ಅದು ಉನ್ನತ ಸ್ಥಾನವನ್ನು ಪಡೆಯುತ್ತಿದೆ… ಕ್ರೀಡೆಗಳು, ಚಲನಚಿತ್ರಗಳು ಮತ್ತು ಸಂಗೀತ ಕ್ಷೇತ್ರಗಳಲ್ಲಿ ಉತ್ಕೃಷ್ಟತೆಯ ಮೂಲಕ ಗುಣಮಟ್ಟ ಅಳತೆಗೋಲು ಹೆಚ್ಚಿಸಲು ಭಾರತಕ್ಕೆ ಅಪಾರ ಅವಕಾಶಗಳಿವೆ. ಒಂದು ದೇಶವಾಗಿ ನಾವು ಹೆಚ್ಚು ವಿಜೇತರನ್ನು ಸೃಷ್ಟಿಸಿದರೆ ನಾವು ಹೆಚ್ಚು ಲಾಭ ಗಳಿಸಬಹುದು,’ ಎಂದು ಟಿವಿ9 ನೆಟ್ವರ್ಕ್​ನ ಸಿಇಒ ತಿಳಿಸಿದರು.

ಎಂಡಿ ಮತ್ತು ಸಿಇಒ ಬರುಣ್ ದಾಸ್, “2016 ರಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಶಾಂತಿಗೆ ಅವಕಾಶ ನೀಡಲು ಒಪ್ಪಿಕೊಂಡಾಗ, ಅದು ಪಿಂಕ್ ಫ್ಲಾಯ್ಡ್‌ನ ರೋಜರ್ ವಾಟರ್ಸ್, ಜಾನ್ ಬಾನ್ ಜೊವಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಅವರಂತಹ ಸೆಲೆಬ್ರಿಟಿಗಳ ಸಮ್ಮುಖದಲ್ಲಿತ್ತು ಎಂದು ನಾವು ಮರೆಯಬಾರದು. ಜನರಲ್ಲಿ ಸದ್ಭಾವನೆ ಎಂಬುದು ಬಾಂಬ್ ಮತ್ತು ಬಂದೂಕುಗಳಿಗೆ ಉತ್ತಮ ಪರ್ಯಾಯವಾಗಿ ಉಳಿದಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇನ್ನಷ್ಟು ಡಬ್ಲ್ಯುಐಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ