Video: ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ, ನಿಲ್ಲಿಸಲು ಅಧಿಕಾರಿಗಳ ಹರಸಾಹಸ

Updated on: Jun 26, 2025 | 2:10 PM

ಯುವತಿಯೊಬ್ಬಳು ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿರುವ ಘಟನೆ ತೆಲಂಗಾಣದ ಕೊಂಡಕಲ್ ರೈಲ್ವೆ ಗೇಟ್ ಬಳಿ ನಡೆದಿದೆ. ಈ ಮಾರ್ಗದಲ್ಲಿ ರೈಲು ಸೇವೆಗೆ ಗಮನಾರ್ಹ ಅಡಚಣೆ ಉಂಟಾಗಿತ್ತು. ರೈಲ್ವೆ ಅಧಿಕಾರಿಗಳ ಪ್ರಕಾರ, ಯುವತಿ ಶಂಕರ್‌ಪಲ್ಲಿಯಿಂದ ಹೈದರಾಬಾದ್ ಕಡೆಗೆ ನೇರವಾಗಿ ಹಳಿಗಳ ಮೇಲೆ ಕಾರನ್ನು ಚಲಾಯಿಸುತ್ತಿರುವುದು ಕಂಡುಬಂದಿದೆ. ರೈಲ್ವೆ ಸಿಬ್ಬಂದಿ ಆಕೆಯನ್ನು ತಡೆಯಲು ಯತ್ನಿಸಿದಾಗ ಇನ್ನೂ ವೇಗವಾಗಿ ಚಾಲನೆ ಮಾಡಿದ್ದಳು.

ಕೊಂಡಕಲ್, ಜೂನ್ 26: ಯುವತಿಯೊಬ್ಬಳು ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿರುವ ಘಟನೆ ತೆಲಂಗಾಣದ ಕೊಂಡಕಲ್ ರೈಲ್ವೆ ಗೇಟ್ ಬಳಿ ನಡೆದಿದೆ. ಈ ಮಾರ್ಗದಲ್ಲಿ ರೈಲು ಸೇವೆಗೆ ಗಮನಾರ್ಹ ಅಡಚಣೆ ಉಂಟಾಗಿತ್ತು. ರೈಲ್ವೆ ಅಧಿಕಾರಿಗಳ ಪ್ರಕಾರ, ಯುವತಿ ಶಂಕರ್‌ಪಲ್ಲಿಯಿಂದ ಹೈದರಾಬಾದ್ ಕಡೆಗೆ ನೇರವಾಗಿ ಹಳಿಗಳ ಮೇಲೆ ಕಾರನ್ನು ಚಲಾಯಿಸುತ್ತಿರುವುದು ಕಂಡುಬಂದಿದೆ. ರೈಲ್ವೆ ಸಿಬ್ಬಂದಿ ಆಕೆಯನ್ನು ತಡೆಯಲು ಯತ್ನಿಸಿದಾಗ ಇನ್ನೂ ವೇಗವಾಗಿ ಚಾಲನೆ ಮಾಡಿದ್ದಾಳೆ.

ಈ ಘಟನೆಯಿಂದ ಸಾಕಷ್ಟು ವಿಳಂಬವಾಗಿದ್ದು, ಬೆಂಗಳೂರಿನಿಂದ ಹೈದರಾಬಾದ್‌ಗೆ ಬರುವ ರೈಲುಗಳು ಪರಿಣಾಮ ಬೀರಿದೆ. ಸೇವೆಗಳು ಸುಮಾರು 45 ನಿಮಿಷಗಳ ಕಾಲ ಸ್ಥಗಿತಗೊಂಡವು. ವಾಹನವನ್ನು ನಿಲ್ಲಿಸಿ ಹಳಿಯಿಂದ ತೆರವುಗೊಳಿಸಲು ಸುಮಾರು 30 ನಿಮಿಷಗಳು ಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಕೆ ಮದ್ಯದ ಅಮಲಿನಲ್ಲಿ ಈ ರೀತಿ ಮಾಡಿರಬಹುದು ಎನ್ನಲಾಗುತ್ತಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jun 26, 2025 02:09 PM