ಹೇರ್ ಡ್ರೈಯರ್ ಬಳಸಲು ಹೋಗಿ ಎರಡೂ ಮುಂಗೈ ಕಳೆದುಕೊಂಡಿರುವ ಬಸವರಾಜೇಶ್ವರಿ ನಿಜಕ್ಕೂ ನತದೃಷ್ಟೆ

ಅರುಣ್​ ಕುಮಾರ್​ ಬೆಳ್ಳಿ

Updated on: Nov 20, 2024 | 6:18 PM

ನಮ್ಮ ಬಾಗಲಕೋಟೆ ವರದಿಗಾರನೊಂದಿಗೆ ಮಾತಾಡಿರುವ ಬಸವರಾಜೇಶ್ವರಿ ತಮ್ಮ ನೋವನ್ನು ದುಃಖದಿಂದ ತೋಡಿಕೊಂಡಿದ್ದಾರೆ. ಸೋಜಿಗದ ಸಂಗತಿಯೆಂದರೆ, ಶಶಿಕಲಾ ಅವರು ಹೇರ್ ಡ್ರೈಯರ್ ಅನ್ನು ಆನ್ ಲೈನ್​ನಲ್ಲಿ ಆರ್ಡರ್ ಮಾಡಿರಲಿಲ್ಲವಂತೆ. ಅದನ್ನು ಅವರಿಗೆ ಯಾರು ಕಳಿಸಿದ್ದರು, ಈ ದುರ್ಘಟನೆ ಆಕಸ್ಮಿಕವೋ ಅಥವ ಉದ್ದೇಶಪೂರ್ವಕವಾಗಿ ಮಶೀನಲ್ಲಿ ಸ್ಫೋಟಕವನ್ನು ಅಳವಡಿಸಲಾಗಿತ್ತೋ ಅನ್ನೋದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಬಾಗಲಕೋಟೆ: ತನ್ನೆರಡೂ ಮುಂಗೈಗಳನ್ನು ಕಳೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಮಹಿಳೆ ನಿಜಕ್ಕೂ ನತದೃಷ್ಟೆ. ಸೇನೆಯಲ್ಲಿದ್ದ ಪತಿ ಹುತಾತ್ಮರಾಗಿದ್ದು ಅವರ ಸಾವಿನ ದುಃಖದಿಂದ ಚೇತರಿಸಿಕೊಳ್ಳುವ ಮೊದಲೇ ಬಸವರಾಜೇಶ್ವರಿ ಆಕಸ್ಮಿಕ ದುರ್ಘಟನೆಯೊಂದರಲ್ಲಿ ತಮ್ಮ ಎರಡೂ ಮುಂಗೈಗಳನ್ನು ಕಳೆದುಕೊಂಡಿದ್ದಾರೆ. ಅವರ ಸ್ನೇಹಿತೆ ಶಶಿಕಲಾ ಹೆಸರಿಗೆ ಪಾರ್ಸೆಲ್ ಮೂಲಕ ಬಂದಿದ್ದ ಹೇರ್ ಡ್ರೈಯರ್ ಅವರ ಆಗ್ರಹ ಮೇರೆಗೆ ತಮ್ಮಲ್ಲೇ ಇಟ್ಟುಕೊಂಡಿದ್ದ ಬಸವರಾಜೇಶ್ವರಿ ಅದನ್ನೊಮ್ಮೆ ಬಳಸಿ ನೋಡೋಣ ಅಂತ ಮಶೀನ್ ಹೊರತೆಗೆದು ಎಲೆಕ್ಟ್ರಿಕ್ ಪ್ಯಾನೆಲ್​ಗೆ ಪ್ಲಗ್ ಸಿಕ್ಕಿಸಿ ಸ್ವಿಚ್ ಆನ್ ಮಾಡಿದಾಗ ಅದು ಬಾಂಬ್​ನ ಹಾಗೆ ಬ್ಲಾಸ್ಟ್ ಆದ ಕಾರಣ ಮುಂಗೈಗಳು ಸುಟ್ಟುಹೋಗಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಾಗಲಕೋಟೆ: ಸ್ನೇಹಿತನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ವಿದೇಶಿಗರು

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.