ಬಾಗಲಕೋಟೆ: ಸ್ನೇಹಿತನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ವಿದೇಶಿಗರು
ಬಾಗಲಕೋಟೆ ತಾಲ್ಲೂಕಿನ ಬೆನಕಟ್ಟಿ ಗ್ರಾಮದಲ್ಲಿ ನಡೆದ ವೆಂಕಟೇಶ್ ಮೇಟಿ ಮತ್ತು ಕಾವ್ಯಾ ಅವರ ಮದುವೆಯಲ್ಲಿ ಜರ್ಮನಿಯಿಂದ ಬಂದ 12 ಯುವಕ-ಯುವತಿಯರು ಭಾಗವಹಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ನೃತ್ಯ ಮಾಡಿದ್ದಾರೆ. ವೆಂಕಟೇಶ್ ಜರ್ಮನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ತನ್ನ ಹುಟ್ಟೂರಿನಲ್ಲಿಯೇ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
ಬಾಗಲಕೋಟೆ, ನವೆಂಬರ್ 18: ಬಾಗಲಕೋಟೆ ತಾಲ್ಲೂಕಿನ ಬೆನಕಟ್ಟಿ ಗ್ರಾಮದ ವೆಂಕಟೇಶ್ ಮೇಟಿ-ಕಾವ್ಯಾ ಎಂಬುವರ ಮದುವೆ (Wedding) ಕಾರ್ಯ ಕ್ರಮದಲ್ಲಿ ವಿದೇಶಿಗರು ಕುಣಿದು ಕುಪ್ಪಳಿಸಿದ್ದಾರೆ. ಜರ್ಮನಿಯಲ್ಲಿ ಸಾಪ್ಟವೇರ್ ಇಂಜಿನಿಯರ್ ಆಗಿರುವ ವೆಂಕಟೇಶ್ ಮೇಟಿ, ತಾನು ಹುಟ್ಟಿದ ಊರಲ್ಲೇ ಮದುವೆ ಆಗಲು ನಿರ್ಧರಿಸಿದ್ದರು. ಹೀಗಾಗಿ ಮದುವೆಗೆ ನಾಲ್ಕು ದಿನ ಮುನ್ನವೇ ಯುರೋಪಿಯನ್ 12 ಯುವಕ ಯುವತಿಯರು ಆಗಮಿಸಿದ್ದಾರೆ. ಗೆಳೆಯನ ಮದುವೆಯಲ್ಲಿ ದೇಶಿ ಸಾಂಪ್ರದಾಯಿಕ ಶೈಲಿಯಲ್ಲಿ ಉಡುಗೆ ತೊಟ್ಟು ಮದುವೆ ಮಂಟಪದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos