ಮದ್ವೆ ಮನೆಯಲ್ಲಿ ಕಳ್ಳರ ಕೈಚಳಕ: ಮದುವೆಗೆಂದು ಇಟ್ಟಿದ್ದ ಚಿನ್ನ, ಹಣ ದೋಚಿದ ಖದೀಮರು

ಮದ್ವೆ ಮನೆಯಲ್ಲಿ ಕಳ್ಳರ ಕೈಚಳಕ: ಮದುವೆಗೆಂದು ಇಟ್ಟಿದ್ದ ಚಿನ್ನ, ಹಣ ದೋಚಿದ ಖದೀಮರು

ಬಿ ಮೂರ್ತಿ, ನೆಲಮಂಗಲ
| Updated By: ರಮೇಶ್ ಬಿ. ಜವಳಗೇರಾ

Updated on:Nov 17, 2024 | 5:10 PM

ಮದುವೆ ಮನೆಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ಮದುವೆಗೆಂದು ಇಟ್ಟಿದ್ದ ಚಿನ್ನ ಹಾಗೂ ಲಕ್ಷಾಂತರ ರೂಪಾಯಿ ಹಣವನ್ನು ದೋಚಿಕೊಂಡು ಹೋಗಿದ್ದಾರೆ. ಇದರಿಂದ ಮನೆಮಂದಿ ಕಂಗಾಲಾಗಿದ್ದಾರೆ.

ಬೆಂಗಳೂರು, (ನವೆಂಬರ್ 17): ಖದೀಮರು ಮದುವೆ ಮನೆಯಲ್ಲಿ ತಮ್ಮ ಕೈಚಳ ತೋರಿಸಿದ್ದಾರೆ. ಹೌದಯ..ಮದುವೆಗೆಂದು ಇಟ್ಟಿದ್ದ ನಗದು ಹಣ ಹಾಗೂ ಚಿನ್ನವನ್ನು ಕದ್ದುಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ಟೀಚರ್ಸ್ ಲೇಔಟ್​ನಲ್ಲಿರುವ ಶಿವಣ್ಣ ಎಂಬುವವರ ಮನೆಯಲ್ಲಿ ನಡೆದಿದೆ. ನಿಶ್ಚಿತಾರ್ಥಕ್ಕೆಂದು ಎಲ್ಲರೂ ಮನೆಯಿಂದ ಕಲ್ಯಾಣ ಮಂಟಪಕ್ಕೆ ತೆರಳಿದ್ದರು. ಅದೇ ಸಮಯದಲ್ಲಿ ಇತ್ತ ಕಳ್ಳರು, ಮನೆಗೆ ನುಗ್ಗಿ ಮದುವೆಗೆಂದು ಇಟ್ಟಿದ್ದ 5 ಲಕ್ಷ ರೂಪಾಯಿ ನಗದು, 6 ಲಕ್ಷ ಮೌಲ್ಯದ 85 ಗ್ರಾಂ ಚಿನ್ನವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ನಿಶ್ಚಿತಾರ್ಥ ಮುಗಿಸಿಕೊಂಡು ಕುಟುಂಬಸ್ಥರು ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳ್ಳರು ಮನೆ ಬಾಗಿಲು ಮುರಿದು ಎಲ್ಲಾವನ್ನೂ ದೋಚಿಕೊಂಡು ಹೋಗಿದ್ದಾರೆ. ಮದ್ವೆಗೆಂದು ಇಟ್ಟಿದ್ದ ಹಣ, ಚಿನ್ನ ಕಳೆದುಕೊಂಡು ಮನೆಮಂದಿ ಕಂಗಾಲಾಗಿದ್ದಾರೆ.

Published on: Nov 17, 2024 05:07 PM