ಬೆಂಗಳೂರಿನಲ್ಲಿ ಬಿಎಂಟಿಸಿ ಸಿಬ್ಬಂದಿ ಜೊತೆ ಮುಂದುವರೆದ ಕಿರಿಕ್: ಪಾಸ್ ತೋರಿಸಿ ಎಂದಿದ್ದಕ್ಕೆ ಆವಾಜ್ ಹಾಕಿದ ಪ್ರಯಾಣಿಕ
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ನಲ್ಲಿ ಪಾಸ್ ತೋರಿಸಲು ನಿರಾಕರಿಸಿದ ಪ್ರಯಾಣಿಕನೊಬ್ಬ, ಬಸ್ ನಿರ್ವಾಹಕ ಮತ್ತು ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಪಾಸ್ ತೋರಿಸುವಂತೆ ಕೇಳಿದರೂ ಪ್ರಯಾಣಿಕ ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾರೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಂಗಳೂರು, ನವೆಂಬರ್ 17: ನಗರದಲ್ಲಿ ಬಿಎಂಟಿಸಿ ಸಿಬ್ಬಂದಿ ಜೊತೆ ಮತ್ತೆ ಕಿರಿಕ್ ಮುಂದುವರೆದಿದೆ. ಪಾಸ್ ತೋರಿಸಿ ಎಂದಿದ್ದಕ್ಕೆ ಬಿಎಂಟಿಸಿ ಬಸ್ ನಿರ್ವಾಹಕ ಮತ್ತು ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಓರ್ವ ಪ್ರಯಾಣಿಕ (Passenger) ಮುಂದಾಗಿರುವಂತಹ ಘಟನೆ ನಡೆದಿದೆ. ಹಲವು ಬಾರಿ ಪಾಸ್ ತೋರಿಸುವಂತೆ ಬಸ್ ನಿರ್ವಾಹಕ ಕೇಳಿದ್ದಾರೆ. ಎಷ್ಟು ಬಾರಿ ಕೇಳಿದ್ರೂ ಪಾಸ್ ತೋರಿಸಲ್ಲ ಅಂತಾ ಪ್ರಯಾಣಿಕ ವಾಗ್ವಾದ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಸಹ ಪ್ರಯಾಣಿಕರಿಗೂ ಆವಾಜ್ ಹಾಕಲಾಗಿದೆ. ಆದರೆ ನಿರ್ವಾಹಕ-ಪ್ರಯಾಣಿಕನ ವಾಗ್ವಾದಕ್ಕೆ ನಿಖರ ಮಾಹಿತಿ ಗೊತ್ತಾಗಿಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಾಗ್ವಾದದ ವಿಡಿಯೋ ವೈರಲ್ ಆಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos