Daily Devotional: ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ಆಹಾರ ಪದ್ಧತಿ ಹೇಗಿರಬೇಕು ತಿಳಿಯಿರಿ
ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವಾಗ ಮಾಂಸಾಹಾರ ಸೇವಿಸುವುದು ಸರಿಯೇ ಎಂಬುದರ ಬಗ್ಗೆ ಅನೇಕರಿಗೆ ಸಂಶಯವಿದೆ. ಧಾರ್ಮಿಕ ಆಚರಣೆಗಳ ಸಮಯದಲ್ಲಿ ಆಹಾರ ಪದ್ಧತಿ ಹೇಗಿರಬೇಕು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಅವರು ತಿಳಿಸಿಕೊಟ್ಟಿದ್ದಾರೆ. ವಿಡಿಯೋ ನೋಡಿ.
ನಮ್ಮ ಕರ್ಮಗಳನ್ನು ಕಳೆದುಕೊಳ್ಳುವ ಸಲುವಾಗಿ ಪುಣ್ಯ ಕೆಲಸ, ಯಾಗ, ಯಜ್ಞಗಳು ಹೀಗೆ ನಾನಾ ಕಾರ್ಯಾಗಳನ್ನು ಮಾಡುತ್ತೇವೆ. ವ್ರತ, ಉಪವಾಸಗಳನ್ನು ಮಾಡುತ್ತೇವೆ. ಜೊತೆಗೆ ಕ್ಷೇತ್ರಗಳ ದರ್ಶನವನ್ನು ಮಾಡುತ್ತೇವೆ. ಹೀಗೆ ಬೇರೆ ಬೇರೆ ಕಡೆಗಳಲ್ಲಿ ಪುಣ್ಯಕೇತ್ರಗಳಿಗೆ (holy places) ಭೇಟಿ ನೀಡಿದಾಗ ಮಾಂಸಹಾರ ತಿನ್ನಬಹುದಾ ಎಂಬ ಪ್ರಶ್ನೆಗಳು ಅನೇಕರಿಗೆ ಬಂದಿರುತ್ತದೆ. ಅಥವಾ ಆಹಾರ ಪದ್ಧತಿ ಹೇಗೆ ಇರುಬೇಕು ಎಂಬ ಪ್ರಶ್ನೆಗಳು ಮೂಡಿರುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ. ವಿಡಿಯೋ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಸಿದ್ಧಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 36 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08:02 ರಿಂದ 09:27ರವರೆಗೆ, ಯಮಘಂಡ ಕಾಲ 10:52 ರಿಂದ ಮಧ್ಯಾಹ್ನ 12:18 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 01:43ರಿಂದ 03:09 ರವರೆಗೆ.
ಮತ್ತಷ್ಟು ಅಧ್ಯಾತ್ಮ ಮಾಹಿತಿಗಾಗಿ ಈ ಲಿಂಕ್ನ್ನು ಕ್ಲಿಕ್ ಮಾಡಿ.