ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್

Updated on: Sep 13, 2024 | 9:08 PM

ರಾಜಸ್ಥಾನದಲ್ಲಿ ಮಹಿಳಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅವರನ್ನು ಮಹಿಳೆಯೊಬ್ಬರು ಕೂದಲು ಹಿಡಿದು ಎಳೆದಾಡಿದ ವಿಡಿಯೋ ವೈರಲ್ ಆಗಿದೆ. ಎಸ್‌ಡಿಎಂ ಸುನೀತಾ ಮೀನಾ ಅವರು ಬುಲ್ಡೋಜರ್ ಜೊತೆಗೆ ಗಂಗಾಪುರ ನಗರ ಜಿಲ್ಲೆಗೆ ಆಗಮಿಸಿದ್ದರು. ಪೊಲೀಸರು ಮತ್ತು ಆಡಳಿತ ತಂಡದ ಮುಂದೆಯೇ ಈ ವೇಳೆ ಅವರ ಜೊತೆ ಮಹಿಳೆ ಘರ್ಷಣೆ ನಡೆಸಿದ್ದಾರೆ. ಬುಲ್ಡೋಜರ್ ಕ್ರಮದಿಂದ ಕೋಪಗೊಂಡ ಮಹಿಳೆ, ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಿದ್ದಾರೆ.

ಜೈಪುರ: ರಾಜಸ್ಥಾನದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮಹಿಳಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಅತಿಕ್ರಮಣಗಳನ್ನು ತಡೆಯಲು ಹೋದಾಗ ಮಹಿಳೆಯೊಬ್ಬರು ಆಕೆಯ ಕೂದಲನ್ನು ಹಿಡಿದು ಎಳೆದಾಡಿದ ಘಟನೆ ನಡೆದಿದೆ. ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಗಂಗಾಪುರ ನಗರದ ತೋಡಭೀಮ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More