Assembly Polls: ಟಿಕೆಟ್ ಗಾಗಿ ಹೆಚ್ಚುತ್ತಿರುವ ಒತ್ತಡ, ಜೆಡಿ(ಎಸ್) ವರಿಷ್ಠರ ಪಾಲಿಗೆ ಬಿಸಿತುಪ್ಪವಾದ ಭವಾನಿ ರೇವಣ್ಣ

|

Updated on: Jan 28, 2023 | 4:06 PM

ಹಾಸನ ಮತಕ್ಷೇತ್ರದ ಮಹಿಳೆಯರು ಶನಿವಾರ ಹೆಚ್ ಡಿ ರೇವಣ್ಣ ಆವರ ಮನೆ ಬಳಿ ಸೇರಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.

ಹಾಸನ: ಈ ಬಾರಿಯ ವಿಧಾನ ಸಭಾ ಚುನಾವನೆಯಲ್ಲಿ ಹಾಸನ ಕ್ಷೇತ್ರದಿಂದ (Hassan constituency) ಭವಾನಿ ರೇವಣ್ಣ (Bhavani Revanna) ಅವರಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ಜೆಡಿಎಸ್ ವರಿಷ್ಠರ ಮೇಲೆ ದಿನೇದಿನೇ ಹೆಚ್ಚುತ್ತಿದೆ. ಅವರು ಗೆಲ್ಲುವ ಕುದುರೆ ಅನ್ನೋದನ್ನು ಅರ್ಥಮಾಡಿಕೊಂಡಿರುವ ಬಿಜೆಪಿ, ಟಿಕೆಟ್ ಸಿಗದಿದ್ದರೆ ನಮ್ಮಲ್ಲಿಗೆ ಬನ್ನಿ ನಾವು ನೀಡುತ್ತೇವೆ ಅನ್ನುತ್ತಿದೆ. ಹೈಕಮಾಂಡ್ ಪಾಲಿಗೆ ಭವಾನಿ ಬಿಸಿತುಪ್ಪವಾಗಿರೋದು ಸತ್ಯ. ಹೆಚ್ ಡಿ ಕುಮಾರಸ್ವಾಮಿ (HD Kumaraswamy) ತಮ್ಮ ಪತ್ನಿ ಹಾಗೂ ಮಗನಿಗೂ ಟಿಕೆಟ್ ನೀಡುವ ಸಾಧ್ಯತೆ ಇರುವುದರಿಂದ ಭವಾನಿ ಅವರಿಗೆ ಟಿಕೆಟ್ ನಿರಾಕರಿಸಿದ ಸ್ಥಿತಿಯಲ್ಲಿದ್ದಾರೆ. ನೀಡಿದರೆ, ಕುಟುಂಬ ರಾಜಕಾರಣ ಅಂತ ಪಕ್ಷದ ನಾಯಕರೇ ಆಡಿಕೊಳ್ಳುತ್ತಾರೆ. ಹಾಸನ ಮತಕ್ಷೇತ್ರದ ಮಹಿಳೆಯರು ಶನಿವಾರ ಹೆಚ್ ಡಿ ರೇವಣ್ಣ ಆವರ ಮನೆ ಬಳಿ ಸೇರಿ ಟಿಕೆಟ್ ಗಾಗಿ ಒತ್ತಾಯಿಸಿದರು. ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ಸಮಾಧಾನಪಡಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 28, 2023 04:04 PM