Sign In

By signing in or creating an account, you agree with Associated Broadcasting Company's Terms & Conditions and Privacy Policy.

Amit Shah in Karnataka: ಅಮಿತ್ ಶಾರ ಕುಂದಗೋಳ್ ರೋಡ್ ಶೋ ಅಂತರವನ್ನು ಅರ್ಧ ಕಿಮೀ ಕಡಿಮೆ ಮಾಡಿದರೂ ಸಾಗರೋಪಾದಿಯಲ್ಲಿ ಜನ!

Amit Shah in Karnataka: ಅಮಿತ್ ಶಾರ ಕುಂದಗೋಳ್ ರೋಡ್ ಶೋ ಅಂತರವನ್ನು ಅರ್ಧ ಕಿಮೀ ಕಡಿಮೆ ಮಾಡಿದರೂ ಸಾಗರೋಪಾದಿಯಲ್ಲಿ ಜನ!

ಅರುಣ್​ ಕುಮಾರ್​ ಬೆಳ್ಳಿ
|

Updated on:Jan 28, 2023 | 4:45 PM

ಕೇಂದ್ರ ಗೃಹ ಸಚಿವರ ಇಚ್ಛೆಯ ಮೇರೆಗೆ ಕುಂದಗೋಳದ ರೋಡ್ ಶೋ ಅಂತರವನ್ನು ಒಂದೂವರೆ ಕಿಮೀನಿಂದ ಒಂದು ಕಿಮೀಗೆ ಇಳಿಸಲಾಗಿದೆ. ಇದರಿಂದಾಗಿ ರಸ್ತೆಯುದ್ದಕ್ಕೂ ನೆರೆದಿದ್ದ ಸಹಸ್ರಾರು ಜನರಿಗೆ ನಿರಾಶೆಯುಂಟಾಗಿರಬಹುದು.

ಧಾರವಾಡ: ಜಿಲ್ಲೆಯ ಕುಂದಗೋಳ್ ದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ರೋಡ್ ಶೋ ಭರ್ಜರಿಯಾಗಿ ನಡೆಯುತ್ತಿದೆ. ಈ ವಿಡಿಯೋದಲ್ಲಿ ಅಮಿತ್ ಶಾ ಅವರು ಹುಬ್ಬಳ್ಳಿಯಿಂದ ಕುಂದಗೋಳ್ (Kundgol) ಆಗಮಿಸುತ್ತಿರುವುದನ್ನು ನೋಡಬಹುದು. ಅಸಲಿಗೆ ಎರಡು ಹೆಲಿಕಾಪ್ಟರ್ ಗಳು ಆಗಮಿಸಿವೆ, ಒಂದರಲ್ಲಿ ಶಾ ಮತ್ತು ಮತ್ತೊಬ್ಬ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಬಂದರೆ ಇನ್ನೊಂದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಇತರ ಗಣ್ಯರು ಆಗಮಿಸಿದರು. ಕೇಂದ್ರ ಗೃಹ ಸಚಿವರ ಇಚ್ಛೆಯ ಮೇರೆಗೆ ಕುಂದಗೋಳದ ರೋಡ್ ಶೋ ಅಂತರವನ್ನು ಒಂದೂವರೆ ಕಿಮೀನಿಂದ ಒಂದು ಕಿಮೀಗೆ ಇಳಿಸಲಾಗಿದೆ. ಇದರಿಂದಾಗಿ ರಸ್ತೆಯುದ್ದಕ್ಕೂ ನೆರೆದಿದ್ದ ಸಹಸ್ರಾರು ಜನರಿಗೆ ನಿರಾಶೆಯುಂಟಾಗಿರಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 28, 2023 04:44 PM