ಮೆಟ್ರೋ ಯೆಲ್ಲೋ ಮಾರ್ಗ ಕಾಮಗಾರಿ ಈಗಾಗಲೇ ವಿಳಂಬವಾಗಿರುವುದರಿಂದ ಲೋಕಾರ್ಪಣೆಗಾಗಿ ಗಣ್ಯರನ್ನು ಕಾಯುವುದು ಬೇಡ: ತೇಜಸ್ವೀ ಸೂರ್ಯ, ಸಂಸದ

|

Updated on: Oct 04, 2023 | 6:17 PM

ಸಿದ್ದರಾಮಯ್ಯ ಲೋಕಾರ್ಪಣೆಯನ್ನು ರಾಹುಲ್ ಗಾಂಧಿ ಅವರಿಂದ ಮಾಡಿಸುತ್ತಾರೋ ಆಥವಾ ಬೇರೆ ಯಾರಾರೂ ಗಣ್ಯರಿಂದ ಮಾಡಿಸುತ್ತಾರೋ ಅವರ ವಿವೇಚನೆಗ ಬಿಟ್ಟ ಸಂಗತಿಯಾಗಿದೆ. ರಾಹುಲ್ ಗಾಂಧಿ ಯಾವಾಗ ಸಮಯ ನೀಡುತ್ತಾರೋ ಗೊತ್ತಿಲ್ಲ, ಆದರೆ ಅಲ್ಲಿಯವರೆಗೆ ಕಾಯದೆ ಮಾರ್ಗವನ್ನು ಉಪಯೋಗಿಸುವ ಅನುಮತಿಯನ್ನು ಸರ್ಕಾರ ನೀಡಲಿ, ಲೋಕಾರ್ಪಣೆ ಕಾರ್ಯಕ್ರಮವನ್ನು ಮುಂದೆ ಯಾವಾಗ ಬೇಕಾದರೂ ಇಟ್ಟುಕೊಳ್ಳಬಹುದು ಎಂದು ತೇಜಸ್ವೀ ಸೂರ್ಯ ಹೇಳಿದರು

ಬೆಂಗಳೂರು: ನಗರದ ದಕ್ಷಿಣ ಭಾಗದ ಪ್ರಮುಖ ಭಾಗಗಳನ್ನು ಸಂಪರ್ಕಿಸುವ ಆರ್ವಿ ರೋಡ್ ನಿಂದ ಬೊಮ್ಮಸಂದ್ರದ ನಡುವಿನ ಯೆಲ್ಲೋ ಮೆಟ್ರೋ ರೈಲು ಮಾರ್ಗ (Metro Yellow Line) ಸಂಪೂರ್ಣಗೊಂಡಿದ್ದು ಲೋಕಾರ್ಪಣೆಗಾಗಿ ಕಾಯುತ್ತಿದೆ. ಇಂದು ಸಂಸದ ತೇಜಸ್ವೀ ಸೂರ್ಯ (Tejasvi Surya) ಮೆಟ್ರೋ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕ ಸಿಕೆ ರಾಮಮೂರ್ತಿ (CK Ramamurthy) ಅವರೊಂದಿಗೆ ಮಾರ್ಗವನ್ನು ಪರಿಶೀಲಿಸಿದ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತಾಡಿದರು. ಕಾಮಗಾರಿ ಈಗಾಗಲೇ ಸಾಕಷ್ಟು ವಿಳಂಬಗೊಂಡಿರುವುದರಿಂದ ಮತ್ತು ಬೆಂಗಳೂರು ದಕ್ಷಿಣ ಭಾಗದ ಜನ ಟ್ರಾಫಿಕ್ ಸಮಸ್ಯೆಯಿಂದ ನಿರಂತರವಾಗಿ ತೊಂದರೆ ಅನುಭವಿಸುತ್ತಿರುವುದರಿಂದ ರಾಜ್ಯ ಸರ್ಕಾರ ಆದಷ್ಟು ಬೇಗ ಮಾರ್ಗವನ್ನು ಲೋಕಾರ್ಪಣೆ ಮಾಡಬೇಕು ಎಂದು ಹೇಳಿದರು. ಸಿದ್ದರಾಮಯ್ಯ ಲೋಕಾರ್ಪಣೆಯನ್ನು ರಾಹುಲ್ ಗಾಂಧಿ ಅವರಿಂದ ಮಾಡಿಸುತ್ತಾರೋ ಆಥವಾ ಬೇರೆ ಯಾರಾರೂ ಗಣ್ಯರಿಂದ ಮಾಡಿಸುತ್ತಾರೋ ಅವರ ವಿವೇಚನೆಗ ಬಿಟ್ಟ ಸಂಗತಿಯಾಗಿದೆ. ರಾಹುಲ್ ಗಾಂಧಿ ಯಾವಾಗ ಸಮಯ ನೀಡುತ್ತಾರೋ ಗೊತ್ತಿಲ್ಲ, ಆದರೆ ಅಲ್ಲಿಯವರೆಗೆ ಕಾಯದೆ ಮಾರ್ಗವನ್ನು ಉಪಯೋಗಿಸುವ ಅನುಮತಿಯನ್ನು ಸರ್ಕಾರ ನೀಡಲಿ, ಲೋಕಾರ್ಪಣೆ ಕಾರ್ಯಕ್ರಮವನ್ನು ಮುಂದೆ ಯಾವಾಗ ಬೇಕಾದರೂ ಇಟ್ಟುಕೊಳ್ಳಬಹುದು ಎಂದು ತೇಜಸ್ವೀ ಸೂರ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on