5 ಕೋಟಿ ಕಳೆದುಕೊಂಡ ಬಳಿಕ ಎಲೆಕ್ಷನ್ನಲ್ಲಿ ಸ್ಪರ್ಧಿಸ್ತಾರಾ ಉದ್ಯಮಿ ಗೋವಿಂದ ಬಾಬು ಪೂಜಾರಿ? ಇಲ್ಲಿದೆ ವಿಡಿಯೋ
ಉದ್ಯಮಿ ಗೋವಿಂದ ಬಾಬು ಪೂಜಾರಿ(Govind Babu Poojari) ಗೆ 5 ಕೋಟಿ ವಂಚನೆ ಪ್ರಕರಣ ಚೈತ್ರಾ, ಅಭಿನವ ಹಾಲಶ್ರೀ ಸ್ವಾಮೀಜಿ ಹಣ ಪಡೆದ ಅಸಲಿ ಕಥೆಯನ್ನು ಉದ್ಯಮಿ ಗೋವಿಂದಬಾಬು ಬಿಚ್ಚಿಟ್ಟಿದ್ದಾರೆ. ಜೊತೆಗೆ ಅವರ ಮುಂದಿನ ರಾಜಕೀಯ ನಡೆ ಬಗ್ಗೆ ಈ ಕುರಿತು ಹೇಳಿದ್ದಾರೆ.
ಬೆಂಗಳೂರು, ಅ.04: ಉದ್ಯಮಿ ಗೋವಿಂದ ಬಾಬು ಪೂಜಾರಿ(Govind Babu Poojari) ಗೆ 5 ಕೋಟಿ ವಂಚನೆ ಪ್ರಕರಣ ಚೈತ್ರಾ, ಅಭಿನವ ಹಾಲಶ್ರೀ ಸ್ವಾಮೀಜಿ ಹಣ ಪಡೆದ ಅಸಲಿ ಕಥೆಯನ್ನು ಉದ್ಯಮಿ ಗೋವಿಂದಬಾಬು ಬಿಚ್ಚಿಟ್ಟಿದ್ದಾರೆ. ಈ ಕುರಿತು ಮಾತನಾಡಿದ ಅವರು ‘ಚೈತ್ರಾ ರಾಜಕೀಯ ಪ್ರಭಾವಿಯಂತೆ ನನಗೆ ದುಡ್ಡು ಕೊಡಲು ಒತ್ತಾಯಿಸಿದರು. ಹಣ ಪಡೆಯಲು ಎಲ್ಲಾ ರೀತಿಯ ಪ್ಲ್ಯಾನ್ ಮಾಡಿದ್ದೇ ಚೈತ್ರಾ. ಜೊತೆಗೆ ಆಕೆಯೇ ಸ್ವಾಮೀಜಿ ಸೇರಿದಂತೆ ಇತರರನ್ನು ಪರಿಚಯಸಿದರು ಎಂದು ಹೇಳಿದ್ದಾರೆ. ಇದೇ ವೇಳೆ ಅವರ ಮುಂದಿನ ರಾಜಕೀಯ ನಡೆ ಬಗ್ಗೆ ‘ ನಾನು ಮೊದಲಿನಿಂದಲೂ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಮುಂದೆಯೂ ಕೂಡ ಮಾಡುತ್ತಿರುತ್ತೇನೆ. ಯಾವುದೇ ಎಂಎಲ್ಎ ಆಗುವ ಆಸೆ ಇಲ್ಲ. ನನ್ನ ಸಮಾಜ ಸೇವೆ ಕೆಲಸ ಕೂಡ ನಡೆಯುತ್ತಿರುತ್ತೆ. ಅದನ್ನೇ ಮುಂದುವರೆಸಿಕೊಂಡು ಹೋಗುತ್ತೇನೆ ಎಂದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ