WPL 2026: ಒಂದೇ ಓವರ್​ನಲ್ಲಿ 32 ರನ್..! 22 ಎಸೆತಗಳಲ್ಲಿ 50 ರನ್ ಚಚ್ಚಿದ ಹ್ಯಾರಿಸ್; ವಿಡಿಯೋ
Grace Harris

WPL 2026: ಒಂದೇ ಓವರ್​ನಲ್ಲಿ 32 ರನ್..! 22 ಎಸೆತಗಳಲ್ಲಿ 50 ರನ್ ಚಚ್ಚಿದ ಹ್ಯಾರಿಸ್; ವಿಡಿಯೋ

Updated on: Jan 12, 2026 | 10:28 PM

RCB's Grace Harris Equals WPL Record: ಯುಪಿ ವಾರಿಯರ್ಸ್ ನೀಡಿದ 144 ರನ್‌ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ, ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ಭರ್ಜರಿ ಆರಂಭ ಪಡೆಯಿತು. ಗ್ರೇಸ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಗಳಿಸಿ, ಡಿಯಾಂಡ್ರಾ ಡಾಟಿನ್ ಓವರ್‌ನಲ್ಲಿ 32 ರನ್ ಕಲೆಹಾಕಿ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸೋಫಿ ಡಿವೈನ್ ದಾಖಲೆಯನ್ನು ಸರಿಗಟ್ಟಿದರು. ಸ್ಮೃತಿ ಮಂಧಾನ ಜೊತೆ ಶತಕದ ಜೊತೆಯಾಟವೂ ದಾಖಲಾಯಿತು.

ಯುಪಿ ವಾರಿಯರ್ಸ್​ ತಂಡ ನೀಡಿರುವ 144 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ ಭರ್ಜರಿ ಆರಂಭ ಕಂಡಿತು. ಆರಂಭಿಕರಾದ ಸ್ಮೃತಿ ಮಂಧಾನ ಹಾಗೂ ಸ್ಫೋಟಕ ಬ್ಯಾಟರ್ ಗ್ರೇಸ್ ಹ್ಯಾರಿಸ್ ಅಜೇಯ ಶತಕದ ಜೊತೆಯಾಟ ಕಟ್ಟಿದ್ದಾರೆ. ಅದರಲ್ಲೂ ಕೇವಲ 8 ಓವರ್​ಗಳಲ್ಲಿ ತಂಡ ಶತಕದ ಗಡಿ ದಾಟಿತು. ಈ ವೇಳೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಗ್ರೇಸ್ ಹ್ಯಾರಿಸ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಅದರಲ್ಲೂ ವೆಸ್ಟ್ ಇಂಡೀಸ್​ನ ಸ್ಟಾರ್ ಆಲ್‌ರೌಂಡರ್ ಡಿಯಾಂಡ್ರಾ ಡಾಟಿನ್ ಬೌಲ್​ ಮಾಡಿದ ಪವರ್​ ಪ್ಲೇನ ಕೊನೆಯ ಓವರ್​ನಲ್ಲಿ ಅಂದರೆ 6ನೇ ಓವರ್​ನಲ್ಲಿ ಉಗ್ರರೂಪ ತಾಳಿದ ಹ್ಯಾರಿಸ್ ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗರೆದು ಬರೋಬ್ಬರಿ 32 ರನ್ ಕಲೆಹಾಕಿದರು. ಈ ಮೂಲಕ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಂದೇ ಓವರ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಜಂಟಿ ದಾಖಲೆ ನಿರ್ಮಿಸಿದರು. ನಿನ್ನೆಯಷ್ಟೇ ಮಾಜಿ ಆರ್​ಸಿಬಿ ಆಟಗಾರ್ತಿ ಸೋಫಿ ಡಿವೈನ್ ಒಂದೇ ಓವರ್​ನಲ್ಲಿ 32 ರನ್ ಕಲೆಹಾಕಿ ಈ ದಾಖಲೆ ನಿರ್ಮಿಸಿದ್ದರು.

Published on: Jan 12, 2026 10:27 PM