VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!

Updated on: Jan 12, 2026 | 8:04 AM

Delhi Capitals Women vs Gujarat Giants Women: 20ನೇ ಓವರ್​ನ ಮೊದಲ ಎಸೆತದಲ್ಲಿ ಸೋಫಿ ಡಿವೈನ್ ನೀಡಿದ್ದು ಕೇವಲ 1 ರನ್ ಮಾತ್ರ. ಇನ್ನು ಎರಡನೇ ಎಸೆತದಲ್ಲಿ ಜೆಮಿಮಾ ರೊಡ್ರಿಗಸ್ ವಿಕೆಟ್ ಕಬಳಿಸಿದರು. ಮೂರನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. ನಾಲ್ಕನೇ ಎಸೆತದಲ್ಲಿ ಮರಿಝನ್ನೆ ಕಪ್ ಒಂದು ರನ್ ಕಲೆಹಾಕಿದರು. ಐದನೇ ಎಸೆತದಲ್ಲಿ ಲಾರಾ ವೊಲ್​ಫೋರ್ಟ್​ ವಿಕೆಟ್ ಪಡೆದರು. ಆರನೇ ಎಸೆತದಲ್ಲಿ ಯಾವುದೇ ರನ್ ನೀಡದೇ ಗುಜರಾತ್ ಜೈಂಟ್ಸ್ ತಂಡಕ್ಕೆ 4 ರನ್​​ಗಳ ರೋಚಕ ಜಯ ತಂದುಕೊಟ್ಟರು.

ಗುಜರಾತ್ ಜೈಂಟ್ಸ್ ತಂಡದಿಂದ 210 ರನ್​ಗಳ ಗುರಿ… ಕೊನೆಯ ಮೂರು ಓವರ್​ಗಳಲ್ಲಿ 48 ರನ್​ಗಳ ಅವಶ್ಯಕತೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು 18ನೇ ಓವರ್​ನಲ್ಲಿ ಕಲೆಹಾಕಿದ್ದು ಬರೋಬ್ಬರಿ 19 ರನ್​​ಗಳು. 19ನೇ ಓವರ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್​ಗಳಿಂದ ಮೂಡಿಬಂದ ಸ್ಕೋರ್​ ಬರೋಬ್ಬರಿ 22 ರನ್​​ಗಳು. ಅದರಂತೆ ಅಂತಿಮ ಓವರ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೇವಲ 7 ರನ್​​ಗಳ ಅವಶ್ಯಕತೆ.

ಕ್ರೀಸ್​ನಲ್ಲಿದದ್ದು ಲಾರಾ ವುಲ್​ಫರ್ಟ್ ಹಾಗೂ ಜೆಮಿಮಾ ರೊಡ್ರಿಗಸ್. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಖಚಿತ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈ ಹಂತದಲ್ಲಿ ದಾಳಿಗಿಳಿದ ಅನುಭವಿ ಆಟಗಾರ್ತಿ ಸೋಫಿ ಡಿವೈನ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು.

20ನೇ ಓವರ್​ನ ಮೊದಲ ಎಸೆತದಲ್ಲಿ ಸೋಫಿ ಡಿವೈನ್ ನೀಡಿದ್ದು ಕೇವಲ 1 ರನ್ ಮಾತ್ರ. ಇನ್ನು ಎರಡನೇ ಎಸೆತದಲ್ಲಿ ಜೆಮಿಮಾ ರೊಡ್ರಿಗಸ್ ವಿಕೆಟ್ ಕಬಳಿಸಿದರು. ಮೂರನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. ನಾಲ್ಕನೇ ಎಸೆತದಲ್ಲಿ ಮರಿಝನ್ನೆ ಕಪ್ ಒಂದು ರನ್ ಕಲೆಹಾಕಿದರು. ಐದನೇ ಎಸೆತದಲ್ಲಿ ಲಾರಾ ವುಲ್​ಫರ್ಟ್​ ವಿಕೆಟ್ ಪಡೆದರು. ಆರನೇ ಎಸೆತದಲ್ಲಿ ಯಾವುದೇ ರನ್ ನೀಡದೇ ಗುಜರಾತ್ ಜೈಂಟ್ಸ್ ತಂಡಕ್ಕೆ 4 ರನ್​​ಗಳ ರೋಚಕ ಜಯ ತಂದುಕೊಟ್ಟರು.

ಈ ಮೂಲಕ ಗುಜರಾತ್ ಜೈಂಟ್ಸ್ ತಂಡವು ಸೋಲುವ ಪಂದ್ಯವನ್ನು ಗೆಲ್ಲುವ ಮೂಲಕ 2 ಅಂಕಗಳನ್ನು ಪಡೆದುಕೊಂಡಿದೆ. ಅತ್ತ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗೆಲ್ಲಬಹುದಾಗಿದ್ದ ಮ್ಯಾಚ್​ನಲ್ಲೂ ಸೋತಿದೆ.

 

Published on: Jan 12, 2026 08:03 AM