ಪತ್ನಿಯ ಶೀಲ ಶಂಕಿಸಿ ಹೆತ್ತ ಮಕ್ಕಳನ್ನೇ ಕೊಲೆಗೈದ ತಂದೆ

Updated on: Sep 26, 2025 | 1:28 PM

ಪತ್ನಿಯ ಶೀಲ ಶಂಕಿಸಿ ಸಿಟ್ಟಿನಲ್ಲಿ ವ್ಯಕ್ತಿಯೊಬ್ಬ ತನ್ನ ಹೆತ್ತ ಮಕ್ಕಳನ್ನೇ ಬರ್ಬರವಾಗಿ ಹತ್ಯೆ ನಡೆಸಿರುವಂತಹ ಆಘಾತಕಾರಿ ಘಟನೆ ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ನಡೆದಿದೆ. ಶರಣಪ್ಪ ಎಂಬಾತ ತನ್ನ ಮೂವರು ಮಕ್ಕಳ ಪೈಕಿ ಇಬ್ಬರನ್ನು ಕೊಂದು ಎಸ್ಕೇಪ್‌ ಆಗಿದ್ದಾರೆ. ಇತ್ತ ಕಡೆ ಮುದ್ದಿನ ಮೊಮ್ಮಕ್ಕಳನ್ನು ಕಳೆದುಕೊಂಡ ಅಜ್ಜಿಯ ಆಕ್ರಂದಣ ಮುಗಿಲು ಮುಟ್ಟಿದೆ.

ಯಾದಗಿರಿ, ಸೆಪ್ಟೆಂಬರ್‌ 26: ಪತ್ನಿಯ ಶೀಲ ಶಂಕಿಸಿ, ಅದೇ ಸಿಟ್ಟಿಗೆ ವ್ಯಕ್ತಿಯೋರ್ವ ತನ್ನ ಹೆತ್ತ ಮಕ್ಕಳನ್ನೇ ಬರ್ಬರವಾಗಿ ಹತ್ಯೆ ಮಾಡಿದಂತಹ ಆಘಾತಕಾರಿ ಘಟನೆ ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ನಡೆದಿದೆ. ಶರಣಪ್ಪ ಎಂಬಾತ ತನ್ನ ಪತ್ನಿಗೆ ಅಕ್ರಮ ಸಂಬಂಧವಿದೆ (illegal relationship) ಎಂದು ಅನುಮಾನಪಟ್ಟು ತನ್ನ ಮೂವರು ಮಕ್ಕಳ ಪೈಕಿ ಇಬ್ಬರನ್ನು ಕೊಲೆಗೈದು ಎಸ್ಕೇಪ್‌ ಆಗಿದ್ದಾನೆ. ಪಾಪಿ ತಂದೆಯ ಈ ಕೃತ್ಯಕ್ಕೆ ಏನೂ ಅರಿಯದ ಮುಗ್ಧ ಕಂದಮ್ಮಗಳು ಜೀವ ಬಿಟ್ಟಿದ್ದು, ಮುದ್ದು ಮೊಮ್ಮಕ್ಕಳನ್ನು ಕಳೆದುಕೊಂಡ ಅಜ್ಜಿಯ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ