‘ರೈಟ್​ ಹ್ಯಾಂಡ್​​ನಲ್ಲಿ ಹಾಕಬೇಕು ಮಗಳೇ..’: ಮುದ್ದಿನ ಪುತ್ರಿ ಆಯ್ರಾಗೆ ಯಶ್​ ಬುದ್ಧಿಮಾತು

Updated on: Jun 21, 2023 | 2:25 PM

Nanjangud Temple: ಆರತಿ ತೆಗದುಕೊಂಡ ಬಳಿಕ ಅರ್ಚಕರಿಗೆ ದಕ್ಷಿಣೆ ಹಾಕುವಾಗ ಆಯ್ರಾ ಎಡಗೈ ಬಳಸಿದಳು. ಆಗ ಮಗಳಿಗೆ ಯಶ್​ ಅವರು ಪ್ರೀತಿಯಿಂದ ತಿಳಿಹೇಳಿದರು.

‘ರಾಕಿಂಗ್​ ಸ್ಟಾರ್​’ ಯಶ್ (Yash) ಹಾಗೂ ಅವರ ಪತ್ನಿ ರಾಧಿಕಾ ಪಂಡಿತ್ ಅವರು ಮೈಸೂರಿನ ನಂಜನಗೂಡಿಗೆ (Nanjangud Temple) ಭೇಟಿ ನೀಡಿದ್ದಾರೆ. ಮಕ್ಕಳಾದ ಆಯ್ರಾ ಯಶ್​ ಹಾಗೂ ಯಥರ್ವ್​ ಯಶ್​ ಜೊತೆ ಬಂದು ಅವರು ಶ್ರೀಕಂಠೇಶ್ವರನ ದರ್ಶನ ಪಡೆದಿದ್ದಾರೆ. ಆರತಿ ತೆಗೆದುಕೊಂಡ ಬಳಿಕ ಅರ್ಚಕರ ತಟ್ಟೆಗೆ ದಕ್ಷಿಣೆ ಹಾಕುವಾಗ ಆಯ್ರಾ (Ayra Yash) ಎಡಗೈ ಬಳಸಿದಳು. ಆಗ ಮಗಳಿಗೆ ಯಶ್​ ಅವರು ಪ್ರೀತಿಯಿಂದ ತಿಳಿಹೇಳಿದರು. ‘ರೈಟ್​ ಹ್ಯಾಂಡ್​ನಲ್ಲಿ ಹಾಕಬೇಕು ಮಗಳೇ..’ ಎಂದು ಅವರು ಬುದ್ಧಿ ಹೇಳಿದರು. ಈ ಸಂದರ್ಭದ ವಿಡಿಯೋ ಇಲ್ಲಿದೆ. ಯಶ್​ ಅವರ ಹೊಸ ಸಿನಿಮಾ ಅನೌನ್ಸ್ ಮಾಡುವುದು ಬಾಕಿ ಇದೆ. ಇತ್ತೀಚೆಗಷ್ಟೇ ಅವರು ಐಷಾರಾಮಿ ಕಾರು ಖರೀದಿ ಮಾಡಿ ಸುದ್ದಿ ಆಗಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More