‘ಯಶ್ ಸಹಾಯ ಮಾಡಿದ್ದಾರೆ, ಮತ್ತೆ ಕೇಳೋದು ತಪ್ಪಾಗುತ್ತೆ’; ಹರೀಶ್ ರಾಯ್
ಹರೀಶ್ ರೈ ಅವರು ಸದ್ಯ ಕ್ಯಾನ್ಸರ್ನಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕ್ಯಾನ್ಸರ್ ಈಗ ದೇಹಕ್ಕೆ ಪಸಿರುಸುತ್ತಿದೆ. ಅವರು ಇದರಿಂದ ಹೊರಗೆ ಬರೋದು ಹೇಗೆ ಎಂಬುದು ತಿಳಿಯದೇ ಒದ್ದಾಡುತ್ತಿದ್ದಾರೆ. ಈ ಮಧ್ಯೆ ಯಶ್ ಸಹಾಯದ ಬಗ್ಗೆ ಹರೀಶ್ ರೈ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
‘ಕೆಜಿಎಫ್’ ಸಿನಿಮಾದಲ್ಲಿ ಚಾಚಾ ಹೆಸರಿನ ಪಾತ್ರ ಮಾಡಿದ್ದ ಹರೀಶ್ ರಾಯ್ (Harish Rai) ಈಗ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಅವರು ಎಲ್ಲರ ಸಹಾಯ ಕೇಳುತ್ತಿದ್ದಾರೆ. ಹರೀಶ್ ಅವರಿಗೆ ಯಶ್ ಸಹಾಯ ಮಾಡಿಲ್ಲ ಎಂದೆಲ್ಲ ಕೆಲವರು ಹೇಳಿದ್ದರು. ಈ ವಿಚಾರವಾಗಿ ಅವರು ಮಾತನಾಡಿದ್ದಾರೆ. ಯಶ್ ಮಾಡಿದ ಸಹಾಯವನ್ನು ನೆನಪಿಸಿಕೊಂಡಿದ್ದಾರೆ. ‘ಯಶ್ ಈಗಾಗಲೇ ಸಹಾಯ ಮಾಡಿದ್ದಾರೆ. ಅವರ ಬಳಿ ಮತ್ತೆ ಸಹಾಯ ಕೇಳೋದು ತಪ್ಪಾಗುತ್ತದೆ’ ಎಂದಿದ್ದಾರೆ ಅವರು. ಅದರ ಸಂಪೂರ್ಣ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Aug 29, 2025 10:17 AM
