ಹೆಣ್ಣಿಗೆ ಶಾಸಕಿಯಾಗುವ ಹುಚ್ಚು ಹಿಡಿದರೆ ಅದನ್ನು ಬಿಡಿಸುವುದು ಸಾಧ್ಯವಿಲ್ಲ: ಮುನಿರತ್ನ, ಬಿಜೆಪಿ ಶಾಸಕ
ಮುನಿರತ್ನ ಅವರಿಗೆ ಪೊಲೀಸ್ ರಕ್ಷಣೆ ಒದಗಿಸಲಾಗಿದೆ. ವೇದಿಕೆಯ ಮೇಲೆ ನಿಂತು ಮಾತಾಡಿದ ಮುನಿರತ್ನ, ನನ್ನ ಕಾವಲಿಗೆ ನಿಂತಿರುವ ಪೊಲೀಸರಿಗೆಲ್ಲ ಧನ್ಯವಾದಗಳು, ನನ್ನ ರಕ್ಷಣೆಗಾಗಿ ನೀವೆಲ್ಲ ಹಗಲಿರುಳು ಶ್ರಮಿಸುತ್ತಿರುವಿರಿ ಎಂದು ಹೇಳಿದರು. ಕುಸುಮ ಇತ್ತೀಚಿಗೆ ಸುದ್ದಿಯಲ್ಲಿದ್ದರು, ಅವರ ಸಹೋದರನ ಮನೆಯ ಮೇಲೆ ಈಡಿ ಅಧಿಕಾರಿಗಳು ದಾಳಿ ನಡೆಸಿ ಕಾಗದ ಪತ್ರಗಳ ಪರಿಶೀಲನೆ ನಡೆಸಿದ್ದರು.
ಬೆಂಗಳೂರು, ಆಗಸ್ಟ್ 29: ರಾಜಾರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಮತ್ತು ಕಾಂಗ್ರೆಸ್ ನಾಯಕಿ ಕುಸುಮ ಹನುಮಂತರಾಯಪ್ಪ (Kusuma Hanumantharayappa) ನಡುವಿನ ರಾಜಕೀಯ ವೈರತ್ವ ಎಲ್ಲರಿಗೂ ಗೊತ್ತಿರುವಂಥದ್ದೇ. ನಿನ್ನೆ ತಮ್ಮ ಕ್ಷೇತ್ರದ ಒಂದು ಭಾಗದಲ್ಲಿ ನಡೆದ ಗಣೇಶ ಉತ್ಸವದಲ್ಲಿ ಭಾಗಿಯಾಗಿದ್ದ ಮುನಿರತ್ನ, ಈಗಾಗಲೇ ತಮ್ಮಿಂದ ಸೋತಿರುವ ಕುಸುಮ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಒಂದು ಹೆಣ್ಣಿಗೆ ಯಾವ ಹುಚ್ಚು ಹಿಡಿದರೂ ಅದನ್ನು ಬಿಡಿಸಬಹುದು, ಆದರೆ ಎಂಎಲ್ಎ ಆಗುವ ಹುಚ್ಚು ಹಿಡಿದರೆ ಬಿಡಿಸಲಾಗಲ್ಲ ಎಂದು ಮುನಿರತ್ನ ಹೇಳಿದರು. ನಂತರ ಅವರು, ಯಾರ ಹಣೇಲಿ ಏನು ಬರೆದಿದೆಯೋ ಗೊತ್ತಿಲ್ಲ, ಭೂಮಿಗೆ ಬಂದವರೆಲ್ಲ ಒಂದಲ್ಲ ಒಂದು ದಿನ ಹೋಗಲೇಬೇಕು ಎಂದರು.
ಇದನ್ನೂ ಓದಿ: ಮುನಿರತ್ನ ವಿರುದ್ಧ ಕ್ರಮ ಜರುಗಿಸದ ಅಶೋಕ ಮತ್ತು ವಿಜಯೇಂದ್ರ ಅಸಮರ್ಥ ನಾಯಕರು: ಡಿಕೆ ಸುರೇಶ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

