ಜಿಮ್ಸ್​ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ನಟ ಯಶ್​

| Updated By: ಮದನ್​ ಕುಮಾರ್​

Updated on: Jan 08, 2024 | 10:04 PM

ಯಶ್​ ಜನ್ಮದಿನದ ಪ್ರಯುಕ್ತ ಬ್ಯಾನರ್​ ಕಟ್ಟುವಾಗ ವಿದ್ಯುತ್​ ಶಾಕ್​ ತಗುಲಿ ಗಾಯಗೊಂಡ ಅಭಿಮಾನಿಗಳಾದ ಮಂಜುನಾಥ ಮತ್ತು ಹನಮಂತಪ್ಪ ಅವರಿಗೆ ಜಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಭೇಟಿ ನೀಡಿದ ಯಶ್​ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಗದಗ ಜಿಲ್ಲೆಯ ಸೊರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಯಲ್ಲಿ ಯಶ್​ ಅಭಿಮಾನಿಗಳು (Yash Fans) ಮೃತರಾಗಿದ್ದು, ಅವರ ಕುಟುಂಬದವರಿಗೆ ಯಶ್​ ಸಾಂತ್ವನ ಹೇಳಿದ್ದಾರೆ. ಬಳಿಕ ಗಾಯಾಳುಗಳು ದಾಖಲಾಗಿರುವ ಜಿಮ್ಸ್​ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ. ಬ್ಯಾನರ್​ ಕಟ್ಟುವಾಗ ವಿದ್ಯುತ್​ ತಂತಿ ತಗುಲಿ ಗಾಯಗೊಂಡ ಮಂಜುನಾಥ ಹಾಗೂ ಹನಮಂತಪ್ಪ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಮ್ಸ್​ (GIMS) ಆಸ್ಪತ್ರೆಗೆ ಭೇಟಿ ನೀಡಿದ ಯಶ್​ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಸೊರಣಗಿ ಗ್ರಾಮದ ರೀತಿಯೇ ಆಸ್ಪತ್ರೆಯಲ್ಲೂ ಕೂಡ ಯಶ್ (Yash)​ ಅವರನ್ನು ನೋಡಲು ಜನರು ಜಮಾಯಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow us on