[lazy-load-videos-and-sticky-control id=”MvC_W_tKxgk”]
ಬೆಂಗಳೂರು: ತಮ್ಮ ವಾರ್ಡ್‌ನಲ್ಲಿ ಕೋವಿಡ್ ನಿರ್ವಹಣೆಗೆ ಬಿಬಿಎಂಪಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕಾರ್ಪೋರೇಟರ್ ಒಬ್ಬರು ಸೀಮೆ ಎಣ್ಣೆ ತಂದು ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.
ಪರಿಸ್ಥಿತಿ ನಿರ್ವಹಿಸಲು ನಮ್ಮ ಬಳಿ ಡಾಕ್ಟರ್ಸ್ ಆಗಲಿ ನರ್ಸ್ ಆಗಲಿ ಇಲ್ಲ. ಕೇವಲ ಒಬ್ಬರು ಡಾಕ್ಟರ್ ಮತ್ತು ಓರ್ವ ನರ್ಸ್ ಇದ್ದಾರೆ. ಹೀಗಾಗಿ ಪಿಪಿಇ ಕಿಟ್, ಅಡಿಷನಲ್ ಡಾಕ್ಟರ್ಸ್, ಆಶಾ ಕಾರ್ಯಕರ್ತೆಯರು ಹಾಗೂ ಸ್ಟಾಫ್ ನರ್ಸ್‌ಗಳನ್ನು ತಮ್ಮ ವಾರ್ಡ್‌ಗೆ ಕಳಿಸಿ, ಇಲ್ಲದಿದ್ರೆ ಇಲ್ಲಿಯೇ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದರು.
ಕಾರ್ಪೊರೇಟರ್ ಸೀಮೆ ಎಣ್ಣೆ ತರ್ತಿದ್ದಂತೆ ಎಚ್ಚೆತ್ತುಕೊಂಡ ಬಿಬಿಎಂಪಿ ಆರ್ ಆರ್ ನಗರ ವಲಯ ಅಧಿಕಾರಿ ಜಗದೀಶ್, ನಿಮ್ಮ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ, ಫುಡ್ ಕಿಟ್ ಕೂಡಾ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು. ಆಗ ಪ್ರತಿಭಟನೆ ಕೈಬಿಟ್ಟ ಕಾರ್ಪೊರೇಟರ್ ಜಿಕೆ ವೆಂಕಟೇಶ್, ಡಾಕ್ಟರ್, ರೇಷನ್ ಕಿಟ್ ಕೊಟ್ಟಿಲ್ಲ ಅಂದ್ರೆ ಮತ್ತೆ ಬಂದು ಜೆಸಿ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಎಚ್ಚರಿಸಿದರು.
Published On - 2:36 pm, Fri, 24 July 20