Yogi Dwarakish: ‘ಚಿತ್ರರಂಗದ ವಿವಾದ ಬೀದಿಗೆ, ಕೋರ್ಟ್​ಗೆ ಹೋಗಬಾರದು’: ದ್ವಾರಕೀಶ್​ ಪುತ್ರ ಯೋಗಿ ಹೇಳಿಕೆ

Edited By:

Updated on: Jul 18, 2023 | 6:39 PM

Kichcha Sudeep: ಚಿತ್ರರಂಗದಲ್ಲಿನ ವಿವಾದಗಳು ಕೋರ್ಟ್​ ಮೆಟ್ಟಿಲು ಏರಬಾರದು ಎಂದು ದ್ವಾರಕೀಶ್​ ಅವರ ಪುತ್ರ ಯೋಗಿ ಹೇಳಿದ್ದಾರೆ. ಸುದೀಪ್​ ವರ್ಸಸ್​ ಎಂ.ಎನ್​. ಕುಮಾರ್​ ನಡುವಿನ ಮನಸ್ತಾಪದ ಬಗ್ಗೆ ಅವರು ಮಾತನಾಡಿದ್ದಾರೆ.

ನಿರ್ಮಾಪಕ ಎಂ.ಎನ್​. ಕುಮಾರ್​ (MN Kumar) ಮತ್ತು ನಟ ಕಿಚ್ಚ ಸುದೀಪ್​ ಅವರ ನಡುವಿನ ಹಣಕಾಸು ವ್ಯವಹಾರವು ವಿವಾದದ ಸ್ವರೂಪ ಪಡೆದುಕೊಂಡಿದೆ. ಕೋರ್ಟ್​ ಮೂಲಕ ನ್ಯಾಯ ಪಡೆಯಲು ಕಿಚ್ಚ ಸುದೀಪ್​ (Kichcha Sudeep) ನಿರ್ಧರಿಸಿದ್ದಾರೆ. ಆದರೆ ಚಿತ್ರರಂಗದಲ್ಲಿನ ವಿವಾದಗಳು ಕೋರ್ಟ್​ ಮೆಟ್ಟಿಲು ಏರಬಾರದು ಎಂದು ದ್ವಾರಕೀಶ್​ ಅವರ ಪುತ್ರ ಯೋಗಿ ಹೇಳಿದ್ದಾರೆ. ‘ಎಲ್ಲರೂ ನನಗೆ ಸ್ನೇಹಿತರು. ಚಿತ್ರರಂಗ ಒಂದು ಕುಟುಂಬ. ಆ ಕುಟುಂಬದ ವಿವಾದ ನಾಲ್ಕು ಗೋಡೆ ನಡುವೆ ಬಗೆಹರಿಯಬೇಕು. ಇಲ್ಲಿನ ಮನಸ್ತಾಪಗಳನ್ನು ಕೋರ್ಟ್​ಗೆ, ಬೀದಿಗೆ ತೆಗೆದುಕೊಂಡು ಹೋಗುವುದು ತಪ್ಪು’ ಎಂದು ಯೋಗಿ ದ್ವಾರಕೀಶ್ (Yogi Dwarakish)​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.
​

Loading...
Unable to load recommendations.
Follow Us
ಮಂಗಳ ರಾಜ್

ಮಂಗಳ ರಾಜ್ ಮೂಲತಃ ಮಧುಗಿರಿ ಬಳಿಯ ರತ್ನಗಿರಿ ರಂಗಾಪುರದವರು. ಇವರು ಸುದ್ದಿ ಮಧ್ಯಮಕ್ಕೆ ಕಾಲಿಟ್ಟು 13 ವರ್ಷಗಳಾಗಿವೆ. ಈಟಿವಿಯಲ್ಲಿ ಇಂಟರ್​ನ್​ಶಿಪ್​ , ಮಧ್ಯಮದ ಅ, ಆ ಇ ಈ ಕಲಿತಿದ್ದು ಕಸ್ತೂರಿ ನ್ಯೂಸ್ 24 ನಲ್ಲಿ ನಂತ್ರ ರಾಜ್ ನ್ಯೂಸ್, ದಿಗ್ವಿಜಯ ನ್ಯೂಸ್ ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. 2021ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮುಂದುವರಿಸಿದ್ದಾರೆ. ಸಿನಿಮಾ ಅಂದ್ರೆ ಬಾಲ್ಯದಿಂದಲೂ ಹುಚ್ಚು. ಅರಸಿ ಬಂದಿದ್ದು ಸಿನಿಮಾ ಜರ್ನಲಿಸ್ಟ್ ಕೆಲಸ. ಸಿನಿಮಾ ಸುದ್ದಿಗಳ ಕವರೇಜ್, ಸಿನಿಮಾ ಹಾಗೂ ಸಿನಿಮಾ ಮಂದಿಯ ವಿವಾದಗಳು, ವಿಮರ್ಶೆ, ಸಿನಿಮಾದವರ ಸಾವು ನೋವು ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವುಗಳ ವರದಿಗಾರಿಕೆ ಇವರ ಕಾಯಕ. ಸಿನಿಮಾ ನೋಡುವುದೇ ಎಲ್ಲಾ ಆಸಕ್ತಿಗಳಿಗಿಂತ ಹೆಚ್ಚು ಆಸಕ್ತಿ.

Read More