ಪ್ರೀತಿಸಿ ಕಾರಲ್ಲಿ ಹಾರ ವಿನಿಮಯ ಮಾಡಿಕೊಂಡ ಬಳ್ಳಾರಿಯ ಯುವಕ-ಯುವತಿ ಕೇವಲ 12 ತಾಸುಗಳಲ್ಲಿ ಬೇರ್ಪಟ್ಟರು!

Updated on: Jan 03, 2024 | 10:46 AM

ಒಬ್ಬ ಪೊಲೀಸಪ್ಪ ವಿಷಯವೇನು ಅಂತ ತಿಳಿದುಕೊಂಡು, ಎರಡೂ ಪಾರ್ಟಿಗಳನ್ನು ಸ್ಟೇಶನ್ ಗೆ ಕರೆದುಕೊಂಡು ಹೋಗಿ ಒಂದು ಪರಿಹಾರ ಸೂಚಿಸುವ ಬದಲು ಮೂಕ ಪ್ರೇಕ್ಷಕನಂತೆ ಅಮೃತಾಳನ್ನು ಕಾರಲ್ಲಿ ಎಳೆದೊಯ್ಯುವುದನ್ನು ನೋಡುತ್ತಾ ನಿಂತುಬಿಡುತ್ತಾರೆ.

ಬಳ್ಳಾರಿ: ಈ ಘಟನೆಯನ್ನು ಹೇಗೆ ವಿವರಿಸಬೇಕನ್ನುವುದೇ ಅರ್ಥವಾಗುತ್ತಿಲ್ಲ ಸ್ವಾಮಿ. ನಗರದ ಯುವಕ-ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಲು ನಿಶ್ಚಯಿಸುತ್ತಾರೆ ಮತ್ತು ಕಾರೊಂದರಲ್ಲಿ ಹಾರ ವಿನಿಮಯ ಮಾಡಿಕೊಂಡು ಸತಿಪತಿಗಳಾಗುತ್ತಾರೆ. ಅವರ ಹೆಸರು ಶಿವಪ್ರಸಾದ್ (Shivaprasad) ಮತ್ತು ಅಮೃತಾ (Amrita) ಅಂತ ಗೊತ್ತಾಗಿದೆ. ಪ್ರಾಯಶಃ ಶಿವಪ್ರಸಾದ್ ಗೆಳೆಯರು ಅಂದರೆ ಹಾರ ಬದಲಾಯಿಸುವ ವಿಡಿಯೋ ಮಾಡಿದವರು; ಈ ಮದುವೆಗೆ (!) ಸಾಕ್ಷಿ. ಆದರೆ, ಮದುವೆ ಕೇವಲ 12 ಗಂಟೆಗಳ ಅವಧಿಯಲ್ಲಿ ಒಂದು ಭಾರೀ ತಿರುವು ಕಾಣುತ್ತದೆ. ಮದುವೆಗೆ ವಿರೋಧವಿದ್ದ ಅಮೃತಾ ಪೋಷಕರು (Amrita parents) ಮಧ್ಯರಾತ್ರಿ ಅವಳಿದ್ದಲ್ಲಿಗೆ ಬಂದು ಕಾರಲ್ಲಿ ಎಳೆದೊಯ್ಯುತ್ತಿರುವ ದೃಶ್ಯವನ್ನು ಇಲ್ಲಿ ನೋಡಬಹುದು. ಒಬ್ಬ ಪೊಲೀಸಪ್ಪ ವಿಷಯವೇನು ಅಂತ ತಿಳಿದುಕೊಂಡು, ಎರಡೂ ಪಾರ್ಟಿಗಳನ್ನು ಸ್ಟೇಶನ್ ಗೆ ಕರೆದುಕೊಂಡು ಹೋಗಿ ಒಂದು ಪರಿಹಾರ ಸೂಚಿಸುವ ಬದಲು ಮೂಕ ಪ್ರೇಕ್ಷಕನಂತೆ ಅಮೃತಾಳನ್ನು ಕಾರಲ್ಲಿ ಎಳೆದೊಯ್ಯುವುದನ್ನು ನೋಡುತ್ತಾ ನಿಂತುಬಿಡುತ್ತಾರೆ.

ಒಬ್ಬ ಮಹಿಳೆ, ಪ್ರಾಯಶಃ ಯುವತಿಯ ತಾಯಿ ಇರಬಹುದು, ಆಕೆಯ ಮಾತಿನ ಅಬ್ಬರಕ್ಕೆ ಪೊಲೀಸ್ ಗಾಬರಿಯಾಗುಬಿಡುತ್ತಾರೋ, ಹೆದರುತ್ತಾರೋ ಗೊತ್ತಾಗಲಿಲ್ಲ. ಟಿವಿ9 ಬಳ್ಳಾರಿ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಯುವತಿಯನ್ನು ಶಾಂತಿಧಾಮ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ಪಾಪ, ಶಿವಪ್ರಸಾದ್ ಆಕೆಯ ದಾರಿ ಕಾಯುತ್ತಾ ರಸ್ತೆ ಪಕ್ಕ ಕುಳಿತುಬಿಟ್ಟಿದ್ದಾನೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More