‘ಅಭಿಮಾನಿಗಳ ಪ್ರೀತಿ ನೋಡಿ ಮಾತುಗಳೇ ಬರುತ್ತಿಲ್ಲ’: ಬರ್ತ್​ಡೇ ಸಂಭ್ರಮದಲ್ಲಿ ಯುವ ರಾಜ್​ಕುಮಾರ್​

Updated on: Apr 23, 2023 | 2:49 PM

Yuva Rajkumar birthday: ಸಿನಿಮಾ ಶೂಟಿಂಗ್​ಗೆ ಬಿಡುವು ನೀಡಿ ಯುವ ರಾಜ್​ಕುಮಾರ್​ ಅವರು ಹುಟ್ಟುಹಬ್ಬದ ಸಡಗರದಲ್ಲಿ ಭಾಗಿ ಆಗಿದ್ದಾರೆ. ಅಭಿಮಾನಿಗಳ ಪ್ರೀತಿ ಕಂಡು ಅವರಿಗೆ ಖುಷಿ ಆಗಿದೆ.

ನಟ ಯುವ ರಾಜ್​ಕುಮಾರ್​ (Yuva Rajkumar) ಅವರು ಇಂದು (ಏಪ್ರಿಲ್​ 23) ಜನ್ಮದಿನ ಆಚರಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬ (Yuva Rajkumar birthday) ಆಚರಿಸಲು ನೂರಾರು ಅಭಿಮಾನಿಗಳು ಮನೆಗೆ ಬಂದಿದ್ದರು. ಎಲ್ಲರ ಪ್ರೀತಿ ಕಂಡು ಯುವ ರಾಜ್​ಕುಮಾರ್​ ಖುಷಿಯಾಗಿದ್ದಾರೆ. ‘ಫ್ಯಾನ್ಸ್​ ಪ್ರೀತಿಯ ಬಗ್ಗೆ ಮಾತಲ್ಲಿ ಹೇಳೋಕೆ ಆಗಲ್ಲ. ಅವರು ಯಾವಾಗಲೂ ನಮ್ಮ ಮನಸ್ಸಿನಲ್ಲಿ ಇರುತ್ತಾರೆ. ಅಭಿಮಾನಿಗಳು ಕೂಡ ನಮ್ಮ ಮನೆಯವರ ರೀತಿ’ ಎಂದು ಯುವ ರಾಜ್​ಕುಮಾರ್​ ಹೇಳಿದ್ದಾರೆ. ಯುವ’ (Yuva Movie) ಸಿನಿಮಾದ ಶೂಟಿಂಗ್​ಗೆ ಬಿಡುವು ನೀಡಿ ಅವರು ಹುಟ್ಟುಹಬ್ಬದ ಸಡಗರದಲ್ಲಿ ಭಾಗಿ ಆಗಿದ್ದಾರೆ. ಈ ಸಿನಿಮಾ ಡಿಸೆಂಬರ್​ನಲ್ಲಿ ರಿಲೀಸ್​ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Apr 23, 2023 02:49 PM
Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More