Sign In

By signing in or creating an account, you agree with Associated Broadcasting Company's Terms & Conditions and Privacy Policy.

Yuva Rajkumar: ಅಭಿಮಾನಿಗಳ ಜತೆ ಯುವ ರಾಜ್​ಕುಮಾರ್​ ಹುಟ್ಟುಹಬ್ಬ ಆಚರಣೆ; ಹೊಸ ಪೋಸ್ಟರ್​ ಹಂಚಿಕೊಂಡ ‘ಹೊಂಬಾಳೆ’

Yuva Rajkumar Birthday: ಕುಟುಂಬದವರು ಮತ್ತು ಫ್ಯಾನ್ಸ್​ ಜೊತೆ ಯುವ ರಾಜ್​ಕುಮಾರ್​ ಅವರು ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಈ ವೇಳೆ ಪುನೀತ್​ ರಾಜ್​ಕುಮಾರ್​ ಅವರನ್ನು ನೆನೆದು ರಾಘವೇಂದ್ರ ರಾಜ್​ಕುಮಾರ್​ ಭಾವುಕರಾಗಿದ್ದಾರೆ.

Follow us
ಮದನ್​ ಕುಮಾರ್​
|

Updated on:Apr 23, 2023 | 12:21 PM

ಡಾ. ರಾಜ್​ಕುಮಾರ್​ ಕುಟುಂಬದ ಕುಡಿ, ನಟ ಯುವ ರಾಜ್​ಕುಮಾರ್​ (Yuva Rajkumar) ಅವರು ಇಂದು (ಏಪ್ರಿಲ್​ 23) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ 30ನೇ ವರ್ಷದ ಬರ್ತ್​ಡೇ ಸಂಭ್ರಮದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಭಾಗಿ ಆಗಿದ್ದಾರೆ. ಬೆಂಗಳೂರಿನ ಸದಾಶಿವನಗರದ ನಿವಾಸದ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗಿದೆ. ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಯುವ ರಾಜ್​ಕುಮಾರ್​ ಅವರು ಹುಟ್ಟುಹಬ್ಬ (Yuva Rajkumar Birthday) ಆಚರಿಸಿಕೊಂಡಿದ್ದಾರೆ. ರಾಜ್ಯದ ಬೇರೆ ಬೇರೆ ಕಡೆಗಳಿಂದ ಬಂದಿರುವ ಅಭಿಮಾನಿಗಳು ಬಂದಿದ್ದ ಕೇಕ್​ಗಳನ್ನು ಯುವ ಅವರು ಕತ್ತರಿಸಿದ್ದಾರೆ. ತಂದೆ ರಾಘವೇಂದ್ರ ರಾಜ್​ಕುಮಾರ್​, ತಾಯಿ ಮಂಗಳಾ ಹಾಗೂ ಸಹೋದರ ವಿನಯ್​ ರಾಜ್​ಕುಮಾರ್​ ಜೊತೆಯಲ್ಲಿ ಅವರು ಜನ್ಮದಿನ ಆಚರಿಸಿಕೊಂಡಿದ್ದಾರೆ. ಈ ವೇಳೆ ಪುನೀತ್​ ರಾಜ್​ಕುಮಾರ್​ ಅವರನ್ನು ನೆನೆದು ರಾಘವೇಂದ್ರ ರಾಜ್​ಕುಮಾರ್​ (Raghavendra Rajkumar) ಭಾವುಕರಾಗಿದ್ದಾರೆ.

‘ಹ್ಯಾಪಿ ಬರ್ತ್​ಡೇ ಮಗನೆ. ಅಭಿಮಾನಿಗಳ ಆಶೀರ್ವಾದ ನಿನ್ನ ಮೇಲೆ ಸದಾ ಇರಲಿ. ಅವರನ್ನು ಚೆನ್ನಾಗಿ ನೋಡಿಕೋ’ ಎಂದು ಪುತ್ರನಿಗೆ ರಾವೇಂದ್ರ ರಾಜ್​ಕುಮಾರ್​ ಸಲಹೆ ನೀಡಿದ್ದಾರೆ. ಈ ಪ್ರೀತಿ ಸಿಗುತ್ತಿರುವುದು ಪುನೀತ್​ ರಾಜ್​ಕುಮಾರ್​ ಅವರಿಂದ ಎಂದು ಕೂಡ ರಾಘಣ್ಣ ಹೇಳಿದ್ದಾರೆ.

‘ಈ ದಿನ ನಾನು ತಮ್ಮನನ್ನು ನೆನಪಿಸಿಕೊಳ್ಳಲೇಬೇಕು. ಅವನ ಅಶೀರ್ವಾದದಿಂದಲೇ ಇದೆಲ್ಲ ನಡೆಯುತ್ತಿರೋದು. ‘ಅಪ್ಪು’ ಸಿನಿಮಾ ರಿಲೀಸ್​ ಆದ್ಮೇಲೆ ತಮ್ಮನ ಬರ್ತ್​ಡೇ ಆಗಿತ್ತು. ಆಗ ಕೂಡ ಅಭಿಮಾನಿಗಳು ಇದೇ ರೀತಿ ಸೆಲೆಬ್ರೇಟ್​ ಮಾಡಿದ್ದರು. ಅದನ್ನು ನೋಡಿ ಅಪ್ಪಾಜಿ ಖುಷಿಪಟ್ಟಿದ್ದರು. ಆ ದೃಶ್ಯ ಇಂದು ನನಗೆ ನೆನಪಾಗುತ್ತಿದೆ. ಈ ವರ್ಷ ನನ್ನ ಮಗ ಸಿನಿಮಾ ಇಂಡಸ್ಟ್ರಿಯಲ್ಲಿ ಹುಟ್ಟುತ್ತಿದ್ದಾನೆ. ಮಗನ ಹುಟ್ಟುಹಬ್ಬ ಇಷ್ಟು ಜೋರಾಗಿ ಆಚರಣೆ ಮಾಡಿದರೆ ಯಾವ ತಂದೆಗೆ ಖುಷಿ ಆಗಲ್ಲ ಹೇಳಿ.. ಅಭಿಮಾನಿ ದೇವರುಗಳು ಎಂದರೆ ನಿಜಕ್ಕೂ ದೇವರುಗಳು’ ಎಂದು ರಾಘಣ್ಣ ಹೇಳಿದ್ದಾರೆ.

‘ಇದನ್ನೆಲ್ಲ ನೋಡೋಕೆ ನನ್ನ ಜೀವ ಇದೆಯಲ್ಲ ಅಂತ ನನಗೆ ಖುಷಿ ಆಗುತ್ತದೆ. ಜನರ ಆಶೀರ್ವಾದ ಅವನ ಮೇಲೆ ಯಾವಾಗಲೂ ಇರಲಿ. ಅವನ ಸಿನಿಮಾ ಶೂಟಿಂಗ್​ ಈಗ ಶುರುವಾಗಿದೆ. ಅವನ ಮೇಲೆ ಭಾರ ಹಾಕಬೇಡಿ. ಚೆನ್ನಾಗಿ ಮಾಡು ಎಂದು ಹಾರೈಸಿ’ ಎಂದು ಅಭಿಮಾನಿಗಳಲ್ಲಿ ರಾಘವೇಂದ್ರ ರಾಜ್​ಕುಮಾರ್​ ಕೇಳಿಕೊಂಡಿದ್ದಾರೆ.

Yuva Rajkumar: ‘ಗೌರವ ಯಾವಾಗಲೂ ಪರಸ್ಪರ ಅಲ್ವಾ?’: ಫ್ಯಾನ್ಸ್​ ವಾರ್​ ಕುರಿತು ಯುವ ರಾಜ್​ಕುಮಾರ್​ ಖಡಕ್​ ಪ್ರಶ್ನೆ

ಯುವ ರಾಜ್​ಕುಮಾರ್ ಮೊದಲ ಸಿನಿಮಾಕ್ಕೆ ‘ಯುವ’ ಎಂದು ಹೆಸರಿಡಲಾಗಿದೆ. ಸಂತೋಷ್​ ಆನಂದ್ ರಾಮ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾಗೆ ‘ಹೊಂಬಾಳೆ ಫಿಲ್ಮ್ಸ್​’ ಬಂಡವಾಳ ಹೂಡುತ್ತಿದೆ. ಈ ವರ್ಷ ಡಿಸೆಂಬರ್​ ತಿಂಗಳಲ್ಲಿ ‘ಯುವ’ ಸಿನಿಮಾ ಬಿಡುಗಡೆ ಆಗಲಿದೆ. ಹೊಸ ಪೋಸ್ಟರ್​ ಹಂಚಿಕೊಳ್ಳುವ ಮೂಲಕ ‘ಹೊಂಬಾಳೆ ಫಿಲ್ಮ್ಸ್​’ ಕಡೆಯಿಂದ ಯುವ ರಾಜ್​ಕುಮಾರ್​ಗೆ ಹುಟ್ಟುಹಬ್ಬದ ಶುಭಾಶಯ ಕೋರಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:21 pm, Sun, 23 April 23

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು