Yash: ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ಬಿಂದಾಸ್ ಆಗಿ ಕುಣಿದ ‘ರಾಕಿಂಗ್ ಸ್ಟಾರ್’ ಯಶ್ ವಿಡಿಯೋ ವೈರಲ್
Hardik Pandya Wedding Video: ಉದಯಪುರದಲ್ಲಿ ನಡೆದ ಹಾರ್ದಿಕ್ ಪಾಂಡ್ಯ-ನತಾಶಾ ಸ್ಟಾಂಕೊವಿಚ್ ಮದುವೆಗೆ ಅನೇಕ ಗಣ್ಯರು ಹಾಜರಿ ಹಾಕಿದ್ದರು. ಯಶ್ ಅವರು ಎಲ್ಲರ ಜೊತೆ ಡ್ಯಾನ್ಸ್ ಮಾಡಿ ಖುಷಿಪಟ್ಟಿದ್ದರು.
ನಟ ‘ರಾಕಿಂಗ್ ಸ್ಟಾರ್’ ಯಶ್ (Yash) ಅವರು ಸಿನಿಮಾ ಮಾತ್ರವಲ್ಲದೇ ಬೇರೆ ಕ್ಷೇತ್ರದ ಸೆಲೆಬ್ರಿಟಿಗಳ ಜೊತೆಗೂ ಸ್ನೇಹ ಹೊಂದಿದ್ದಾರೆ. ‘ಕೆಜಿಎಫ್’ ಸಿನಿಮಾ ಬಳಿಕ ದೇಶಾದ್ಯಂತ ಫೇಮಸ್ ಆದ ಅವರಿಗೆ ಕ್ರಿಕೆಟ್ ಲೋಕದ ಅನೇಕರ ಜೊತೆ ಉತ್ತಮ ಒಡನಾಟ ಇದೆ. ಹಾರ್ದಿಕ್ ಪಾಂಡ್ಯ ಮದುವೆಗೆ ಅವರು ಹಾಜರಿ ಹಾಕಿದ್ದೇ ಅದಕ್ಕೆ ಸಾಕ್ಷಿ. ಈ ವರ್ಷ ಫೆಬ್ರವರಿಯಲ್ಲಿ ಹಾರ್ದಿಕ್ ಪಾಂಡ್ಯ ಅವರು ನತಾಶಾ ಸ್ಟಾಂಕೊವಿಕ್ ಜೊತೆ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ಆದರು. ಉದಯಪುರದಲ್ಲಿ ನಡೆದ ಈ ಅದ್ದೂರಿ ವಿವಾಹ (Hardik Pandya Marriage) ಸಮಾರಂಭಕ್ಕೆ ಅನೇಕ ಗಣ್ಯರು ಭಾಗಿ ಆಗಿದ್ದರು. ಆ ಸಂದರ್ಭದ ವಿಡಿಯೋ ತುಣುಕುಗಳು ಈಗ ವೈರಲ್ ಆಗಿವೆ. ನಟ ಯಶ್ ಅವರು ಹಾರ್ದಿಕ್ ಪಾಂಡ್ಯ (Hardik Pandya) ಜೊತೆ ಬಿಂದಾಸ್ ಆಗಿ ಸ್ಟೆಪ್ ಹಾಕಿದ್ದರು. ಇದನ್ನು ಕಂಡು ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯ ಮತ್ತು ಯಶ್ ನಡುವೆ ಉತ್ತಮ ಸ್ನೇಹ ಇದೆ. ಈ ಮೊದಲು ಕೂಡ ಅವರಿಬ್ಬರು ಜೊತೆಯಾಗಿರುವ ಫೋಟೋಗಳು ವೈರಲ್ ಆಗಿದ್ದವು. ಉದಯಪುರದಲ್ಲಿ ನಡೆದ ಮದುವೆಗೆ ಅನೇಕ ಗಣ್ಯರನ್ನು ಆಹ್ವಾನಿಸಲಾಗಿತ್ತು. ಯಶ್ ಅವರು ಸಖತ್ ಸ್ಟೈಲಿಶ್ ಆಗಿಯೇ ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ಎಲ್ಲರ ಜೊತೆ ಡ್ಯಾನ್ಸ್ ಮಾಡಿ ಖುಷಿಪಟ್ಟಿದ್ದರು.
#Yash Dance at #HardikPandya Wedding Party .
Coming Soon #Yash19 #HardikPandya #Krunalpandya pic.twitter.com/J4r6ghWyzJ
— Cine Magic (@CinemaaMagic) April 22, 2023
ಅಂದಹಾಗೆ, 2020ರ ಮೇ ತಿಂಗಳಲ್ಲೇ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೊವಿಚ್ ಮದುವೆ ನೆರವೇರಿತ್ತು. ಆ ಸಂದರ್ಭದಲ್ಲಿ ಕೊವಿಡ್ ನಿಯಮಗಳು ಇದ್ದ ಕಾರಣ ಬಹಳ ಖಾಸಗಿಯಾಗಿ ಮದುವೆ ನೆರವೇರಿಸಲಾಗಿತ್ತು. ಕೆಲವೇ ಕೆಲವು ಮಂದಿ ಮಾತ್ರ ಆ ಸಮಾರಂಭಕ್ಕೆ ಸಾಕ್ಷಿ ಆಗಿದ್ದರು. ಆದರೆ ಈ ವರ್ಷ ಫೆಬ್ರವರಿಯಲ್ಲಿ ಮತ್ತೊಮ್ಮೆ ಎಲ್ಲರ ಸಮ್ಮುಖದಲ್ಲಿ ಈ ಜೋಡಿ ಮದುವೆ ಮಾಡಿಕೊಂಡರು.
ಇದನ್ನೂ ಓದಿ: ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡ ಯಶ್; ಸಖತ್ ಫನ್ನಿ ಆಗಿದೆ ಅಡ್ವಟೈಸ್ಮೆಂಟ್
‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಯಶ್ ಅವರ ಡಿಮ್ಯಾಂಡ್ ಹೆಚ್ಚಾಗಿದೆ. ಅನೇಕ ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಇದೆಲ್ಲದರ ನಡುವೆ ಅವರು ಹೊಸ ಸಿನಿಮಾದ ತಯಾರಿಯಲ್ಲೂ ತೊಡಗಿಕೊಂಡಿದ್ದಾರೆ. ‘ಕೆಜಿಎಫ್ 2’ ಬಳಿಕ ಅವರು ನಟಿಸಲಿರುವ ಮುಂದಿನ ಸಿನಿಮಾ ಯಾವುದು ಎಂಬುದು ಇನ್ನೂ ಬಹಿರಂಗ ಆಗಿಲ್ಲ.
ಇದನ್ನೂ ಓದಿ: ಮಲಯಾಳಂ ನಿರ್ದೇಶಕಿ ಜೊತೆ ಕೈ ಜೋಡಿಸಿದ ಯಶ್? ತಿಂಗಳೊಳಗೆ ಸಿಗಲಿದೆ ಅಧಿಕೃತ ಮಾಹಿತಿ
ಯಶ್ ಆ ನಿರ್ದೇಶಕರ ಜೊತೆ ಸಿನಿಮಾ ಮಾಡುತ್ತಾರೆ, ಈ ನಿರ್ಮಾಪಕರ ಜೊತೆ ಕೈ ಜೋಡಿಸುತ್ತಾರೆ ಎಂಬಿತ್ಯಾದಿ ಗಾಸಿಪ್ಗಳು ಹಬ್ಬಿವೆ. ಆದರೆ ಆ ಯಾವ ವಿಚಾರಗಳ ಬಗ್ಗೆಯೂ ಯಶ್ ಪ್ರತಿಕ್ರಿಯೆ ನೀಡಿಲ್ಲ. ಶೀಘ್ರದಲ್ಲೇ ಅವರ ಹೊಸ ಸಿನಿಮಾ ಅನೌನ್ಸ್ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:37 am, Sun, 23 April 23