ಟ್ವಿಟರ್ ಹೊಸ ನಿಯಮ; ಯಶ್, ಅಲ್ಲು ಅರ್ಜುನ್ ಸೇರಿ ಎಲ್ಲಾ ಸೆಲೆಬ್ರಿಟಿಗಳ ಬ್ಲೂಟಿಕ್ ಮಾಯ

ಎಲಾನ್ ಮಸ್ಕ್​ ಟ್ವಿಟರ್ ಸಿಇಒ ಆದ ಬಳಿಕ ಹೊಸ ಹೊಸ ನಿಯಮ ಜಾರಿಗೆ ತರುತ್ತಿದ್ದಾರೆ. ಅದರಲ್ಲಿ ಬ್ಲೂ ಪಡೆಯಲು ಹಣ ಪಾವತಿಸಬೇಕು ಎಂಬುದು ಕೂಡ ಒಂದು.

ಟ್ವಿಟರ್ ಹೊಸ ನಿಯಮ; ಯಶ್, ಅಲ್ಲು ಅರ್ಜುನ್ ಸೇರಿ ಎಲ್ಲಾ ಸೆಲೆಬ್ರಿಟಿಗಳ ಬ್ಲೂಟಿಕ್ ಮಾಯ
ಯಶ್-ಅಲ್ಲು ಅರ್ಜುನ್-ಅಮಿತಾಭ್​
Follow us
ರಾಜೇಶ್ ದುಗ್ಗುಮನೆ
|

Updated on:Apr 21, 2023 | 7:14 AM

ಟ್ವಿಟರ್​ನಲ್ಲಿ ಸೆಲೆಬ್ರಿಟಿಗಳ ಖಾತೆಯನ್ನು ಸುಲಭವಾಗಿ ಗುರುತಿಸೋಕೆ ಸಹಕಾರಿ ಆಗುತ್ತಿದ್ದುದು ಬ್ಲೂಟಿಕ್​ನಿಂದ. ಸೆಲೆಬ್ರಿಟಿಗಳ ನಕಲಿ ಖಾತೆ ಯಾವುದು ಹಾಗೂ ಅಸಲಿ ಖಾತೆ ಯಾವುದು ಎಂಬುದು ನೀಲಿ ಟಿಕ್​ನಿಂದ ಸುಲಭದಲ್ಲಿ ಗೊತ್ತಾಗುತ್ತಿತ್ತು. ಆದರೆ, ಈಗ ಯಶ್ (Yash) ಸೇರಿ ಎಲ್ಲಾ ಸೆಲೆಬ್ರಿಟಿಗಳ ಬ್ಲೂಟಿಕ್ ಮಾಯವಾಗಿದೆ. ಅವರು ಮರಳಿ ಬ್ಲೂಟಿಕ್ (Twitter Blue) ಪಡೆಯಬೇಕು ಎಂದರೆ ಹಣ ಪಾವತಿಸಬೇಕು. ಏಪ್ರಿಲ್ 20ರಿಂದ ಈ ನಿಯಮ ಜಾರಿಗೆ ಬಂದಿದೆ. ಹೀಗಾಗಿ, ಸೆಲೆಬ್ರಿಟಿಗಳ ಖಾತೆಯೂ ಜನಸಾಮಾನ್ಯರ ಖಾತೆಯಂತಾಗಿದೆ. ಕೆಲವರಿಗೆ ಇದರಿಂದ ಗೊಂದಲ ಕೂಡ ಆಗಿದೆ.

ಎಲಾನ್ ಮಸ್ಕ್​ ಟ್ವಿಟರ್ ಸಿಇಒ ಆದ ಬಳಿಕ ಹೊಸ ಹೊಸ ನಿಯಮ ಜಾರಿಗೆ ತರುತ್ತಿದ್ದಾರೆ. ಅದರಲ್ಲಿ ಬ್ಲೂ ಪಡೆಯಲು ಹಣ ಪಾವತಿಸಬೇಕು ಎಂಬುದು ಕೂಡ ಒಂದು. ಈ ಮೊದಲು ಸೆಲೆಬ್ರಿಟಿಗಳು ಖಾತೆ ತೆರೆಯುತ್ತಾರೆ ಎಂದಾದರೆ ಟ್ವಿಟರ್ ಕಡೆಯಿಂದ ನೀಲಿ ಟಿಕ್ ಸಿಗುತ್ತಿತ್ತು. ಆದರೆ, ಈಗ ಹಾಗಿಲ್ಲ. ಟ್ವಿಟರ್ ಬ್ಲೂ ಪಡೆಯಬೇಕು ಎಂದಾದರೆ ತಿಂಗಳು ಅಥವಾ ಒಂದು ವರ್ಷದ ಚಂದಾದಾರತ್ವ ಪಡೆಯಬೇಕು. ಈ ಕ್ರಮದಿಂದ ಹಲವಾರು ಸೆಲೆಬ್ರಿಟಿಗಳು ತಮ್ಮ ನೀಲಿ ಟಿಕ್ ಮಾರ್ಕ್ ಅನ್ನು ಕಳೆದುಕೊಂಡಿದ್ದಾರೆ. ಈಗ ಇದನ್ನು ಮರಳಿ ಪಡಯಬೇಕು ಎಂದಾದರೆ ಹಣ ಪಾವತಿಸಬೇಕು. ಬ್ಲೂಟಿಕ್​ಗಾಗಿ ಒಂದು ತಿಂಗಳಿಗೆ 900 ಅಥವಾ ವರ್ಷಕ್ಕೆ 9400 ರೂಪಾಯಿ ಪಾವತಿಸಬೇಕು.

ಇದನ್ನೂ ಓದಿ: ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡ ಯಶ್; ಸಖತ್ ಫನ್ನಿ ಆಗಿದೆ ಅಡ್ವಟೈಸ್​ಮೆಂಟ್

ಯಶ್, ಅಲ್ಲು ಅರ್ಜುನ್, ಟ್ವಿಟರ್​ನಲ್ಲಿ ಯಾವಾಗಲೂ ಆ್ಯಕ್ಟೀವ್ ಆಗಿರುವ ಅಮಿತಾಭ್ ಬಚ್ಚನ್ ಸೇರಿ ಎಲ್ಲಾ ಸೆಲೆಬ್ರಿಟಿ ಟ್ವಿಟರ್ ಬಳಕೆದಾರರ ಬ್ಲೂಟಿಕ್ ಮಾಯವಾಗಿದೆ. ಇನ್ನು, ವಿದೇಶಿ ಸೆಲೆಬ್ರಿಟಿಗಳಿಗೂ ಇದೇ ರೀತಿ ಆಗಿದೆ. ‘ಈಗಾಗಲೇ ಬ್ಲೂಟಿಕ್ ಹೊಂದಿದವರು ಹಣ ಪಾವತಿಮಾಡಬೇಕೆಂದಿಲ್ಲ. ಹೊಸದಾಗಿ ಟ್ವಿಟರ್​ಗೆ ಬರುವವರು ಹಣ ಪಾವತಿಸಬೇಕು’ ಎಂದು ಟ್ವಿಟರ್ ಸಂಸ್ಥೆ ಈ ಮೊದಲು ಹೇಳಿತ್ತು. ಆದರೆ, ಈಗ ನಿಯಮ ಬದಲಿಸಿದೆ.

ಇದನ್ನೂ ಓದಿ: ಇನ್​ಸ್ಟಾಗ್ರಾಮ್, ಫೇಸ್​ಬುಕ್​ನಲ್ಲಿ ಬಂದೇ ಬಿಡ್ತು ಹಣ ಕೊಟ್ಟು ಬ್ಲೂ ಟಿಕ್ ಪಡೆಯುವ ಆಯ್ಕೆ: ಬೆಲೆ ಎಷ್ಟು?

ಬ್ಲೂಟಿಕ್ ಚಂದಾದಾರರಾದವರಿಗೆ ವಿವಿಧ ಆಯ್ಕೆಗಳು ಸಿಗಲಿವೆ. ಟ್ವೀಟ್​ನ ಅಕ್ಷರ ಮಿತಿಯನ್ನು ಶೀಘ್ರದಲ್ಲೇ 10,000ಕ್ಕೆ ಹೆಚ್ಚಿಸಲಾಗುವುದು ಎಂದು ಎಲಾನ್ ಮಸ್ಕ್ ಹೇಳಿದ್ದರು. ಬ್ಲೂಟಿಕ್ ಚಂದಾದಾರರಿಗೆ ಮಾತ್ರ ಈ ಆಯ್ಕೆ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:11 am, Fri, 21 April 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ